ಜಯ ಜಯ ಜಯ ಜನ್ಮಭೂಮಿ

ಜಯ ಜಯ ಜಯ ಜನ್ಮಭೂಮಿ
ಜಯ ಜಯ ಜಯ ಮಾತೃಭೂಮಿ || ಪ ||
ಆಕಾಶಗಂಗೆ ಇಳಿದು ಬಂದ ಭೂಮಿ
ಶ್ರೀ ಕೃಷ್ಣಗೀತೆಯ ಅಮೃತವಿತ್ತ ಭೂಮಿ || ಅ.ಪ ||

ಸ್ನೇಹದ ಕುಸುಮಮಾಲೆ ಧರಿಸಿದ ಭೂಮಿ
ತ್ಯಾಗಿಗಳು ಜನಿಸಿರುವ ಪಾವನ ಭೂಮಿ
ವೇದಾಂತ ಸಾರ ವಿಹಾರ ಪುಣ್ಯಭೂಮಿ
ಭಾರತಭೂಮಿ ಭಾಸುರಭೂಮಿ || 1 ||

ಹೈಮಾದ್ರಿ ವಿಂಧ್ಯಗಳ ಉನ್ನತಭೂಮಿ
ಕಾವೇರಿ ಗಂಗೆಗಳು ಹರಿಯುವ ಭೂಮಿ
ವೇದಾಂತ ಸಾರ ವಿಹಾರ ಪುಣ್ಯಭೂಮಿ
ಭಾರತಭೂಮಿ ಭಾಸುರಭೂಮಿ || 2 ||

Leave a Reply

Your email address will not be published. Required fields are marked *