ಎನ್ನ ದೇಹಾತ್ಮ ರಾಷ್ಟ್ರಕೆ ಅರ್ಪಿತವು
ರಾಷ್ಟ್ರಕ್ಕೆ ನಾನಿಂದು ಋಣಿಯಾಗಿ ಇಹೆನು
ಪಾರಮಾರ್ಥಿಕ ಸತ್ಯ ರಾಷ್ಟ್ರವೇ ಶಾಶ್ವತವು
ಧರ್ಮದ ಕಾಯಕ ಮಾಡ ಹೊರಟಿಹೆ ನಾನು || ಪ ||
ರಕ್ತದ ಕಣಕಣ ಕುದಿದು ಕೇಳುತಲಿಹವು
ಹಿಂದು ಹಿಂದು ಎನಲು ಹಿಂಜರಿಕೆಯೇಕೆಂದು
ಸೆಟೆದಿಹವು ನರನಾಡಿ ಮಾಂಸ ಮಜ್ಜೆಯು ಇಂದು
ರಾಷ್ಟ್ರದ ಸೇವೆಗೆ ಸಿದ್ದ ನಾವ್ ಎಂದೆಂದೂ || 1 ||
ಛೇದಿಸೇ ದೇಹವ ರಾಷ್ಟ್ರವೇ ಕಾದು
ರಾಷ್ಟ್ರವೇ ಹೋದರೆ ನಾಶವೇ ಶಾಶ್ವತವು
ದೇಹದೇಹವು ಸೇರಿ ರಾಷ್ಟ್ರವೇ ಆಗುವುದು
ರಾಷ್ಟ್ರ ಸೇವೆಗೆ ದೇಹವೇ ಸೇತುವೆಯು || 2 ||
ಆತ್ಮದಾ ಉನ್ನತಿಯೇ ವ್ಯಕ್ತಿಯ ಉನ್ನತಿಯು
ವ್ಯಕ್ತಿಯ ಉನ್ನತಿಯೇ ಲೋಕಕಲ್ಯಾಣವು
ಲೋಕಕಲ್ಯಾಣಕೆ ಆತ್ಮೋನ್ನತಿಯೇ ಸೂತ್ರ
ಹಿರಿದಾಗಬೇಕೆಮ್ಮ ಆತ್ಮೋನ್ನತಿಯ ಗಾತ್ರ || 3 ||