ಗುಣಗಣಮಂಡಿತಯದುವರಲಸಿತಾ
ರಾಜತಿ ಭಾರತಮಾತಾ
ನೀತಿಬೋಧಕಪರಾತ್ಪರಗೀತಾ
ಬೋಧಕಯೋಗಿಜನಾಪ್ತಾ || ಗುಣ ||
ರಮ್ಯ ಸುರಾಲಯಸರಿದಾಕ್ರೀಡೈಃ
ಭವ್ಯ ಸುಲಲಿತನಿಜಾಂಗಾ |
ಅಭಿಮತಸಿದ್ಧಾ ಧನ್ಯಾ
ಶುಭಫಲವೃದ್ಧಿಸುಮಾನ್ಯಾ
ಜೀಯಾದ್ ಭಾರತಶೋಭಾ || ಗುಣ ||
ಅನುದಿನಮಂಗಲದಾಯಕದಯಯಾ
ಭಾರತಮಾತಾ ಜಯತಾತ್ |
ಜಯತಾತ್,
ಜಯತಾತ್,
ಜಯತಾತ್,
ನಿಜಜನಗಣಮವತಾತ್
ಭಶಾರತಮಾತಾ ಜಯತಾತ್ || ಗುಣ ||
ಭಾರತ ದೇಶದ ಬಗೆಗಿನ ಸಂಸ್ಕೃತ ಹಾಡು[ Guna gana mandita yaduvara lasita ]
ಗುಣಗಣಮಂಡಿತ-ಯದುವರಲಸಿತಾ
ರಾಜತಿ ಭಾರತಮಾತಾ ।
ನೀತಿಬೋಧಕಪರಾತ್ಪರಗೀತಾ
ಬೋಧಕಯೋಗಿಜನಾಪ್ತಾ ॥ ೧॥
ಬಹಳಷ್ಟು ಜನರ, ಬಹಳಷ್ಟು ವಿಶಿಷ್ಟಪೂರ್ಣ ಗುಣಗಳಿಂದ ತುಂಬಿದವಳು ಈ ಭಾರತಮಾತೆ. ಯದುವರನಾದ ಶ್ರೀಕೃಷ್ಣನಿಂದ ಶೋಭಿತಳಾದವಳು ಈ ಭಾರತಮಾತೆ. ( ಶ್ರೀಕೃಷ್ಣ ಅವತರಿಸಿದ ಭೂಮಿ ಈ ಭಾರತನಾಡು).
ನೀತಿಯನ್ನು ಕಲಿಸುವಂತಹ ನೈಸರ್ಗಿಕ ಪರಿಸರ ಈ ಮಣ್ಣಿನಲ್ಲಿದೆ. ನೀತಿಯನ್ನು ಬೋಧಿಸುವಂತಹ ಚರಿತ್ರೆಯುಳ್ಳವಳು ಈ ಭಾರತಮಾತೆ. ಜಗತ್ತಿಗೆ ತತ್ತ್ವವನ್ನು ನೀಡಿದ ಮಹಾತ್ಮರು, ಯೋಗಿಗಳು, ಬೋಧಕರು, ಅಂತಹ ಗುರುಗಳಿಗೆ ಆಶ್ರಯದಾತಳಿವಳು. ಅಂತಹ ಮಹಾತ್ಮರು ಅರಸಿ ಬರುವಂತಹ ಭೂಮಿ ಈ ಭಾರತನಾಡು. ಈ ಎಲ್ಲಾ ಮಹಾತ್ಮರಿಂದ ಭಾರತಮಾತೆ ಕಂಗೊಳಿಸುತ್ತಿದ್ದಾಳೆ.
ರಮ್ಯಸುರಾಲಯ-ಸರಿದಾಕ್ರೀಡೈಃ
ಭವ್ಯಸುಲಲಿತನಿಜಾಂಗಾ ।
ಅಭಿಮತಸಿದ್ಧಾ ಧನ್ಯಾ
ಶುಭಫಲವೃದ್ಧಿಸುಮಾನ್ಯಾ
ಜೀಯಾದ್ ಭಾರತಶೋಭಾ ॥ ೨॥
ಇದು ದೇವಾಲಯಗಳ ಭೂಮಿ. ಇಲ್ಲಿ ಒಂದೊಂದು ದೇವತೆಗೆ ಒಂದೊಂದು ದೇವಾಲಯ. ಒಂದೊಂದು ದೇಗುಲವೂ ಇತಿಹಾಸವನ್ನು ಸಾರುವ ತಾಣ. ಅಲ್ಲಿರುವ ಶಿಲ್ಪಕಲೆ, ಕೆತ್ತನೆ, ಅದನ್ನು ಮಾತಿನಿಂದ ವರ್ಣಿಸುವುದು ಅಸಾಧ್ಯ. ಬಾವಿಗಳು, ಕಲ್ಯಾಣಿ, ತಟಾಕಗಳು, ಕೊಳಗಳು, ಹೊಳೆಗಳು, ಇವುಗಳೆಲ್ಲವುಗಳಿಂದ ಶೋಭಿಸುವ ದೇವಾಲಯಗಳು ಈ ಭೂಮಿಯಲ್ಲಿದೆ.
ಹಿಮಾಲಯದಂತಹ ಪರ್ವತಗಳಿಂದ ತುಂಬಿದ ಮೈಯುಳ್ಳವಳು ಈ ಭಾರತಮಾತೆ. ಯಾರು ತಮ್ಮ ಜೀವನದಲ್ಲಿ ಆತ್ಮಸಾಕ್ಷಾತ್ಕಾರ ಬಯಸುತ್ತಾರೋ, ಅಂತಹ ಜನರಿಗೆಲ್ಲರಿಗೂ ಸಿದ್ಧಭೂಮಿ ಈ ಭಾರತ. ಬಹಳ ಸಂಪತ್ತಿನಿಂದ ಕೂಡಿದವಳು ಈ ಭಾರತಮಾತೆ.
ಭಾರತದ ಒಂದೊಂದು ಕಡೆ ಒಂದೊಂದು ರೀತಿಯ ಬೆಳೆಗಳು, ಒಂದೊಂದು ರೀತಿಯ ಹಣ್ಣುಗಳು, ಹೀಗೆ ಒಂದೊಂದು ರೀತಿಯ ಗಿಡ-ಮರಗಳಿಂದ ಶೋಭಿಸುತ್ತಾ ಅದರಿಂದ ಮಾನ್ಯಳಾಗಿರುವ ಈ ಭಾರತಮಾತೆಯ ಶೋಭೆ ಎಂದೆಂದೂ ಜಯಿಸುತ್ತಿರಲಿ.
ಅನುದಿನ-ಮಂಗಲದಾಯಕ-ದಯಯಾ
ಭಾರತಮಾತಾ ಜಯತಾತ್ ।
ಜಯತಾತ್, ಜಯತಾತ್, ಜಯತಾತ್
ನಿಜಜನಗಣಮವತಾತ್
ಭಾರತಮಾತಾ ಜಯತಾತ್ ॥ ೩॥
ಪ್ರತಿದಿನವೂ ನಮಗೆಲ್ಲರಿಗೂ ಮಂಗಳವನ್ನು ಕೊಡುವಂತಹ, ದಯೆಯಿಂದ ನಮ್ಮನ್ನು ಕಾಯುತ್ತಿರುವ ಈ ಭಾರತಮಾತೆ, ಸದಾ ಜಯಿಸುತ್ತಿರಲಿ…..ಜಯಿಸುತ್ತಿರಲಿ…..ವಿಶ್ವದಲ್ಲೇ ಜಯಿಸುತ್ತಿರಲಿ.
ತನ್ನನ್ನು ಪ್ರೀತಿಸುವಂತಹ, ಭಾರತಕ್ಕಾಗಿ ದುಡಿಯುವ ಸಮಸ್ತಜನರ ಗುಂಪನ್ನು ತಾಯಿ ಭಾರತಿ ಸದಾ ಕಾಪಾಡುತ್ತಾ, ತನ್ನ ಹಿರಿಮೆಯನ್ನು ಜಗತ್ತಿಗೆ ಸಾರುತ್ತಿರಲಿ. ಅಂತಹ ಭಾರತಮಾತೆ ಜಯಿಸುತ್ತಿರಲಿ.