ದೇಶ ದೇಶ ದೇಶ ದೇಶ ದೇಶ ನನ್ನದು
ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು || ಪ ||
ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ
ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ
ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು
ಎಲ್ಲ ನನ್ನದು, ಎಲ್ಲ ನನ್ನದು || 1 ||
ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು
ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ
ಬೆಳೆದು ನಿಂತ ವನಸಿರಿಯು, ಕಂಗೊಳಿಪ ಬೃಂದಾವನ
ಎಲ್ಲ ನನ್ನದು, ಎಲ್ಲ ನನ್ನದು || 2 ||
ನರಹರಿಯ ಪಾಂಚಜನ್ಯ, ವಾಲ್ಮೀಕಿಯ ರಾಮಾಯಣ
ವೇದಗಳ ಉದ್ಘೋಷ ಮಂತ್ರತಂತ್ರ ಆವಾಸ
ಕಿವಿಯ ಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ
ಎಲ್ಲ ನನ್ನದು, ಎಲ್ಲ ನನ್ನದು || 3 ||
ವ್ಯಾಸ ಭಾಸ ಕಾಳಿದಾಸ ಬುದ್ಧ ಬಸವ ಕನಕದಾಸ
ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ
ತಾಯಿ ಮಡಿಲ ಮುಗುಳುನಗೆ ಕೋಟಿ ತುಟಿಯ ಮಂದಹಾಸ
ಎಲ್ಲ ನನ್ನದು, ಎಲ್ಲ ನನ್ನದು || 4 ||
Very nice song.
Very nice
ಭಾರತ ಮಾತೆಗೆ ನನ್ನ ಸಾಷ್ಟಾಂಗ ನಮನಗಳು
👌👌👌🙏🙏🙏🙏🙏