ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ

ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ
ಮನುಜರಾಗಿ ಹುಟ್ಟಲಿಲ್ಲಿ ಜನುಮಜನುಮ ಸುಕೃತ || ಪ ||

ನಾಲ್ಕುದಿನದ ಬಾಳು ನಮದು ಆಗಲಿಂದು ಸಾರ್ಥಕ
ತ್ಯಾಗ ಮೆರೆದು ಅಮರರಾದ ಸಂತರೆಮೆಗೆ ಪ್ರೇರಕ
ಮಣ್ಣ ಋಣವ ಕಳೆವುದಕ್ಕೆ ಸೇವೆಯೊಂದೇ ಸಾಧಕ
ನಗುತ ನಲಿವ ರಾಷ್ಟ್ರಕ್ಕಾಗಿ ಸಾಗಬೇಕು ಕಾಯಕ || 1 ||

ಧ್ಯೇಯ ಪಥವ ಬಿಟ್ಟ ಬಾಳ್ವೆ ಬೇಡ ನಮಗೆ ನೀರಸ
ಪರರಿಗಾಗಿ ಸತತ ಮಿಡಿವ ಹೃದಯದಿಂದ ಸಂತಸ
ಕಳೆದು ಬಿಡುವ ರೋಷ ದ್ವೇಷ ಎಲ್ಲ ಮನದ ಕಲ್ಮಶ
ವಿರಸ ಸರಿಸಿ ಹರಿಸಿ ಬಿಡುವ ಶುದ್ಧ ಸ್ನೇಹ ಮಾನಸ || 2 ||

ಸ್ವಾರ್ಥ ಲಾಭ ಸ್ತುತಿಯ ಮೋಹ ಬೇರು ಸಹಿತ ಕೀಳುವ
ತರುವಿನಂತೆ ನೆರಳ ನೀಡಿ ಬದುಕ ಧನ್ಯಗೊಳಿಸುವ
ತಮವು ನಮಗೆ ಬೆಳಕು ಜಗಕೆ ದೀಪದಂತೆ ಬೆಳಗುವ
ಅಳುವನಳಿಸಿ ಪ್ರೀತಿ ಬೆಳೆಸಿ ನಾಡಿನೇಳ್ಗೆ ಕಾಣುವ || 3 ||

One thought on “ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ

Leave a Reply

Your email address will not be published. Required fields are marked *