ದೇಶ ಒಂದೆ ಧ್ಯೇಯ ಒಂದೆ ಭಾಷೆ ನೂರು ಭಾವ ಒಂದೆ

ದೇಶ ಒಂದೆ ಧ್ಯೇಯ ಒಂದೆ

ಭಾಷೆ ನೂರು ಭಾವ ಒಂದೆ

ನನ್ನ ಹೆಮ್ಮೆಯ ನಾಡಿದು

ಮನ ತಣಿಸೆ ಚೆಲುವ ಬೀಡಿದು                          || ಪ ||

 

ಸಿಂಧೂನದಿಯ ಮಣ್ಣಿನಿಂದ

ಹಿಮಾಲಯದ ತಪ್ಪಲಲ್ಲೂ

ಕಾಶ್ಮೀರದ ಕಣಿವೆಯಿಂದ

ಕನ್ಯಾಕುಮಾರಿಯಲ್ಲೂ

ಸೇವೆಯೆಂಬ ಯಜ್ಞದಲ್ಲಿ

ಭಾರತಾಂಬೆಯ ಗೆಲುವಿಗಾಗಿ

ಪ್ರಾಣರಾಷ್ಟ್ರಕೆ ಅರ್ಪಿತ

ಬದುಕು ದೇಶಕೆ ಸಮರ್ಪಿತ                               || 1 ||

 

ಕೆಂಪು ಕಪ್ಪು ಮಣ್ಣಿದು

ಹಸಿರು ಹೊತ್ತ ನಾಡಿದು

ಗೌರಿ ಶಂಕರ ಶಿಖರವಿಹುದು

ನೂರು ನದಿಯ ಭುವಿಯಿದು

ಕೋಟಿ ದೇವರಿರುವರು

ಭೇದಭಾವ ಮರೆವರು

ಅನ್ನುತ್ತನ್ನುತನ್ನುತಾ

ನಾವೆಲ್ಲ ಒಂದು ನಾವೆಲ್ಲ ಹಿಂದು                    || 2 ||

 

ಸಾಧು ಸಂತರ್ಹುಟ್ಟಿಬೆಳೆದು

ವೇದಗಾನ ಮೊಳಗುತಿಹುದು

ಹರಿವುದೊಂದೆ ರಕ್ತವು

ತಾರತಮ್ಯ ತೊರೆದೆವು

ಐಕ್ಯಮಂತ್ರ ಒಂದೆ ಒಂದೆ

ನಮ್ಮ ತಾಯಿ ಭಾರತಾಂಬೆ                              || 3 ||

 

ರಾಜರಾಜರಾಳಿದ

ವೀರಭೂಮಿ ಈ ಧರೆ

ಶಾಂತಿಮಂತ್ರ ಜಪಿಸಿದ

ಪುಣ್ಯಭೂಮಿ ಈ ಧರೆ

ಅಖಂಡ ಹಿಂದುಸ್ಥಾನವು

ವಿಶ್ವಮಾನ್ಯ ಮರೆಯೆವು

ರಾಮನಾಮ ಜಪಿಸುತ

ಅಮರ ನಮ್ಮ ಭಾರತ                                      || 4 ||

Leave a Reply

Your email address will not be published. Required fields are marked *