ಭಾರತದ ಆಗಸದಿ ನವಸೂರ್ಯೋದಯವಾಗುತಿದೆ

ಭಾರತದ ಆಗಸದಿ ನವಸೂರ್ಯೋದಯವಾಗುತಿದೆ
ಶತಶತಮಾನದ ದೈನ್ಯವನಳಿಸುತ ನವ ಜೀವನ ಪ್ರಭೆ ಮೂಡುತಿದೆ || ಪ ||

ರೂಢಿಯ ಜಡತೆಯ ಬಂಧನ ಕಳಚುತ
ನವೋತ್ಸಾಹ ನವ ಸ್ಫೂರ್ತಿಯನೆರೆಯುತ
ಮಸಣದ ಶೂನ್ಯದಿ ಸಾಸಿರ ಸುಮಗಳ
ನವ ನಂದನ ಸಜ್ಜಾಗುತಿದೆ || 1 ||

ತ್ಯಾಗ ತಪೋಮಯ ಋಷಿ ಮುನಿ ಜೀವನ
ಸಾಹಸ ಚೈತ್ರದ ಕ್ಷಾತ್ರೋತ್ಸ್ಫುರಣ
ಶೀಲದ ಶೌರ್ಯದ ಆರಾಧನೆಯಲಿ
ನಾಡಿದು ತನ್ಮಯವಾಗುತಿದೆ || 2 ||

ಬಿಂದುವು ಸಿಂಧುತ್ವಕೆ ತಾನೆಳೆಸಲು
ಕಳೆಯದೆ ಹಿಂದುತ್ವದ ಬಿರಿಯಳಲು
ಬಾನ್ಧರೆ ಬೆಸೆಯುವ ಮಹದಾಕಾಂಕ್ಷೆಯ
ಸಂಘ ಶಕ್ತಿ ಮೈ ತಾಳುತಿದೆ || 3 ||

Leave a Reply

Your email address will not be published. Required fields are marked *