ಭಾರತ ದೇಶದ ಏಕತೆಯಳಿಸುವ
ಕೆಲಸವು ಪ್ರತಿದಿನ ನಡೆಯುತಿದೆ
ಸೋಗಿನ ಪ್ರಗತಿಯ ಹೆಸರಲಿ ನಿತ್ಯವು
ಸಂಸ್ಕೃತಿ ಸಭ್ಯತೆ ಕೆಡುತಲಿದೆ || ಪ ||
ಮೂರ್ಖ ಮತಾಂಧರು ಮಾಡುತಲಿಹರು
ಮನೆಯೊಳಗಡೆಯೇ ಮಸಲತ್ತು
ಒಳಗಡೆ ನುಸುಳುವ ಮುಸಲರಿಗೆಲ್ಲ
ಅಶನವಸತಿಗಳ ನೆರವಿತ್ತು || 1 ||
ಮೊಲೆಯನು ಉಣಿಸುವ ನೆಪದಲಿ ಪೂತನಿ
ಮೋಹಕ ರೂಪದಿ ಬರುತಿಹಳು
ಹೊನ್ನಿನ ಮಣ್ಣಿನ ಆಮಿಷ ತೋರುತ
ಮತಪರಿವರ್ತನೆ ಮಾಡಿಹಳು || 2 ||
ಧರ್ಮ ವಿಲೋಪವು ಮತನಿರಪೇಕ್ಷತೆ
ಸುಮ್ಮನೆ ಮಾತಿನ ಬಡಿವಾರ
ಕುಟಿಲತೆ ಮೆರೆದಿಹ ರಾಜಕಾರಣವು
ಮಾಡಿದ ಮೋಸದ ಹುನ್ನಾರ || 3 ||
ಸುಮ್ಮನೆ ಕುಳಿತಿಹೆ ಹೆಮ್ಮೆಯ ಕುವರನೇ !
ಅಮ್ಮನ ಕರೆಯದು ಕೇಳಿಸದೆ
ನಮ್ಮಯ ಕನಸದು ಅಮ್ಮನ ನೆಮ್ಮದಿ
ನಿನ್ನಯ ಗುರಿಯದು ಕಾಣಿಸದೆ || 4 ||
Download