ಸುಂದರವು ನಮ್ಮೀ ಸನಾತನ ಹೆಮ್ಮೆ ಹಿಂದೂ ಪದ್ಧತಿ ಹಂದರವು ಬಂಧುಗಳು ತಮ್ಮಲಿ ಬೆಸೆವ ಸುಂದರ ಸಂಸ್ಕೃತಿ || ಪ || ಜನನಿ ಜನ್ಮದಭೂಮಿ ನಮ್ಮಯ ನಾಕವೆಂದಿಹ ರಾಮನು ಮನನ ಮಾಡೆಲೊ ನಿಜಸ್ವರೂಪವನೆಂದು ಸಾರಿದ ಕೃಷ್ಣನು “ಕರ್ಮದಲಿ ನೀನಿಲ್ಲದರ ಫಲದಾಸೆ ತೊರೆ” ಯೆಂದಿಹ ಕರೆ ಧರ್ಮಮಾರ್ಗದಿ ಜೀವ ಪೊರೆದಳು ಭರತಭೂಮಿ ವಸುಂಧರೆ || 1 || ಚಂದ್ರಗುಪ್ತನ ಶೌರ್ಯಕೆ ಚಾಣಕ್ಯ ಪಂಡಿತಬೋಧನೆ ಇಂದ್ರಸದೃಶ ಶಿವಾಜಿಗೈದರು ರಾಮದಾಸಾರಾಧನೆ ಮಂದ್ರಹಿಂದೂ ದನಿಯದೇರಿತು ತಾರಕಕೆ ಋಷಿತಪದಲಿ ವಂದೇಮಾತರಂ ಗೀತೆ ರಚಿಸಿದ […]
ಜಯ ಜಯವು ಹೇ ಕಲಿ ಪ್ರತಾಪನೆ ಜಯವು ನಿನ್ನ ಪ್ರತಾಪಕೆ ಧ್ಯೇಯ ಯಾತ್ರಿಕರರಸು ಗೌರವ ಕಾಯ ನೀನೆಮ್ಮ ರಾಷ್ಟ್ರಕೆ || ಪ || ಚೇತಕವನೇರುತಲಿ ದೇಶದ ಜಾತಕವ ಬದಲಾಯಿಸಿ ಘಾತುಕರ ಬೆಂಡೆತ್ತಿ ಕೀರ್ತಿಯ ಕೇತನವ ಮೇಲೆತ್ತಿಸಿ… ಮಾತುಕೃತಿಗಳನೊಂದು ಮಾಡಿಹ ಚೇತನನು ನೀ ರಾಷ್ಟ್ರಕೆ ಸೋತು ಸೊರಗಿದನಕ್ಬರನು ನಿರ್ಭೀತ ನಿನ್ನ ಪ್ರತಾಪಕೆ || 1 || ನಾಡಕಟ್ಟಲು ನಾಡ ತ್ಯಜಿಸುತ ಕಾಡಿನೊಳಗಲೆದಾಡುತ ಬೇಡಜನ ಪಡೆಕಟ್ಟಿಯರಿ ಕಾರ್ಮೋಡ ಕರಗಿಸಿ ಬೀಗುತ ಪಾಡುಪಡುತಲಿ ಸತಿಸುತರ ಕಾಪಾಡಿಕೊಳ್ಳುತ ಕಾದುತ ಮೋಡಿಮಾಡಿದ ರಣಪ್ರತಾಪಿಗೆ ನಾಡಿದೋ […]
ಧ್ಯೇಯ ಸಾಧಕನ ದಾರಿ ಸರಳ ಸುಂದರ ಸರಿ ಬದುಕಿನಾ ಸಮಯವಾ ಸವೆದಿಹುದು ಇಲ್ಲಿ || ಪ || ಭಾರತದ ಹಿರಿಮೆಯ ಮರೆತಿರುವ ಸಮಾಜವ ಬಡಿದೆಬ್ಬಿಸುವಾ ಕಾರ್ಯ ಹಗಲಿರುಳು ನಡೆದಿದೆ || 1 || ಸಂಘಟನೆಯ ಮಂತ್ರದಿ ಶತಮಾನದ ಹೊಸ್ತಿಲಲಿ ದೇಶ ವ್ಯಾಪ್ತವಾಗುವ ಕಾರ್ಯ ನಡೆದಿದೆ ನಿತ್ಯ ನಿರುತದಿ || 2 || ತಾಳ್ಮೆಗೊಂದು ಮಿತಿಯಿರಲಿ ಢೋಂಗೀವಾದಿತನಕೆ ಸೆಡ್ಡು ಹೊಡೆಯುವ ದಿನಕೆ ಸಿದ್ಧವಾಗಿದೆ ಭೂಮಿಕೆ || 3 ||
ಧ್ಯೇಯ ಧರೆಗೆ ಇಳಿದಿದೆ ವೀರ ತರುಣರ ಕರುಳಿಗೆ ಧ್ವಂಸ ಮಾಡಲು ಇರುಳನು ಧರೆಗೆ ಹರಡಲು ಬೆಳಕನು || ಪ || ಶಪಥವೆಂದು ಬಿಡುವೆವು ಧರೆಯ ಶಾಂತಿಗೆ ದುಡಿವೆವು ವೀರಹನುಮನೆ ಸ್ಫೂರ್ತಿಯು ಭಕ್ತಿ ತುಂಬಿದ ಧಾತ್ರಿಯು || 1 || ಧರ್ಮ ಸಾಧನೆ ಪಥವಿದು ಸತ್ಯ ವಾಕ್ಯದ ನಾಡಿದು ಜಯದ ದುಂಧುಬಿ ಮೊಳಗಿದೆ ರಾಮ ಮಂದಿರ ಕಟ್ಟಲು || 2 || ವೀರ ತರುಣರೆ ಬನ್ನಿರಿ ಧರ್ಮ ಕಾರ್ಯಕೆ ದುಡಿಯಿರಿ ವೀರ ಕಂಡ ಕನಸನು ಮಾಡ ಬನ್ನಿ ನನಸನು […]
ಗಾಢ ನೀರವದಲೊಂದು ಸಣ್ಣ ಕದಲಿಕೆ ಸದ್ದು ತನ್ನ ಸುತ್ತಲು ತಾನೇ ತಿರುಗಿ ಅಲೆ ಅಲೆಯಾಗಿ ವಿಶ್ವ ಕಂಪಿಸಿದ ಹೊತ್ತು ವಿಶ್ವವೇ ಕಂಪಿಸಿದ ಹೊತ್ತು ಸಂಘ ಸಂಭವಿಸಿದ ಹೊತ್ತು || ಪ || ಮೈಮರೆವೊ? ಮರಣವೊ? ತನ್ನುಸಿರ ಬಲವಿಹುದೆ? ಆತ್ಮಹೀನತೆ ವಿಷವ ಕಿತ್ತೊಗೆದು ಬದುಕೀತೆ? ಅನುಮಾನ ತುಂಬಿದ ಹೊತ್ತು ಸಂಘ ಸಂಭವಿಸಿದ ಹೊತ್ತು || 1 || ಉಡುಗಿ ಹೋಗಿದ್ದ ಸ್ವರ ಮರಳಿ ಮೊಳಗಿದ ಸದ್ದು ಮರಗಟ್ಟಿ ಮಲಗಿದ ದೇಶ ಬಲಕೆ ಹೊರಳಿದ ಸದ್ದು ಆತ್ಮದರಿವನು ಪಡೆದ ಹೊತ್ತು […]
ಜನುಮ ನೀಡಿದ ಜನ್ಮ ಭೂಮಿಯು ಬಸವಳಿದು ದುರುಳರ ಕಿರುಕುಳ ನಲುಗಿ ನಿಂತಿಹುದು ಸರಿಸಿ ಕತ್ತಲು ದೂರ ಕರೆಯೊ ಕಲಿಪುರುಷ ಕರ್ಮಯೋಗವು ನಿನ್ನ ಬಳಿಗೆ ಬಂದಿಹುದು || ಪ || ಸಾಮ ಬೇಧ ಶತ್ತು ಮಣಿಯದಿರಿ ಭಯವೇನು ? ಪರಶುರಾಮನ ಶಾಪ ಶರವಿಲ್ಲವೇನು? ಧೀಮಂತಿಕೆ ರವಿಯು ಮುಳುಗಿ ಹೋಗುವಾಗ ಧ್ಯೇಯದನುಶಾಸನದಿಂದ ಮರಳಿ ಬರದಿರನೇನು ? || 1 || ಪರಕೀಯರಪಹಾಸ್ಯದಾ ಚಿಂತೆ ನಿನಗೇಕೆ ? ಏಳು ಸಂಸ್ಕೃತಿ ಸೊಬಗ ತೋರುತಲಿ ಜಗಕೆ ಕೂಡಿಬಾಳುವ ಕವಚ ಒಡೆದು ಕುಸಿದಿರುವಾಗ ನಡೆಮುಂದೆ […]
ಎನ್ನ ದೇಹಾತ್ಮ ರಾಷ್ಟ್ರಕೆ ಅರ್ಪಿತವು ರಾಷ್ಟ್ರಕ್ಕೆ ನಾನಿಂದು ಋಣಿಯಾಗಿ ಇಹೆನು ಪಾರಮಾರ್ಥಿಕ ಸತ್ಯ ರಾಷ್ಟ್ರವೇ ಶಾಶ್ವತವು ಧರ್ಮದ ಕಾಯಕ ಮಾಡ ಹೊರಟಿಹೆ ನಾನು || ಪ || ರಕ್ತದ ಕಣಕಣ ಕುದಿದು ಕೇಳುತಲಿಹವು ಹಿಂದು ಹಿಂದು ಎನಲು ಹಿಂಜರಿಕೆಯೇಕೆಂದು ಸೆಟೆದಿಹವು ನರನಾಡಿ ಮಾಂಸ ಮಜ್ಜೆಯು ಇಂದು ರಾಷ್ಟ್ರದ ಸೇವೆಗೆ ಸಿದ್ದ ನಾವ್ ಎಂದೆಂದೂ || 1 || ಛೇದಿಸೇ ದೇಹವ ರಾಷ್ಟ್ರವೇ ಕಾದು ರಾಷ್ಟ್ರವೇ ಹೋದರೆ ನಾಶವೇ ಶಾಶ್ವತವು ದೇಹದೇಹವು ಸೇರಿ ರಾಷ್ಟ್ರವೇ ಆಗುವುದು ರಾಷ್ಟ್ರ ಸೇವೆಗೆ […]
ದೇಶ ಪ್ರೇಮದ ವೀರಘೋಷಣೆ ಮೊಳಗಲಿ ನಾಡಿನೊಡಲಿನ ಸುಪ್ತ ಶಕ್ತಿ ಮಿನುಗಲಿ ಹೊಮ್ಮಲಿ ಹೊರಹೊಮ್ಮತಾ ಚಿಮ್ಮಲು ಬಾನೆತ್ತರ ಸಂಘೋದ್ಘೋಷ ಮನದಲಿ ಸಂಘೋದ್ಘೋಷ || ಪ || ಕರ್ಮಸಾಧನೆಗೈವ ಹಿಂದು, ಮುಂದೆ ಮುಂದೆ ಸಾಗಲಿ ಶ್ರೇಷ್ಠವೃತವ ಮನದಲಿರಿಸಿ ದುಷ್ಟಶಕ್ತಿಯ ಮೆಟ್ಟಲಿ ರುಧಿರವೆಲ್ಲ ಯಜ್ಞದಲ್ಲಿ ಉರಿದು ಉರಿದು ಹೋಗಲು ಸಂಘೋದ್ಘೋಷ ಬದುಕಲಿ ಸಂಘೋದ್ಘೋಷ || 1 || ಸ್ವಾರ್ಥ ಬದುಕಿನ ಬವಣೆ ನೀಗುತ, ರಾಷ್ಟ್ರ ಭಾವನೆ ಗಳಿಸುತಾ ಹೆಜ್ಜೆ-ಹೆಜ್ಜೆಗೂ ಸೇವೆಗೈಯುತಾ, ಶತ್ರು ಹೃದಯವೆ ಗೆಲ್ಲುತಾ ಶಕ್ತಿಯೆಲ್ಲಾ ರಾಷ್ಟ್ರಕಾರ್ಯಕೆ ಸರ್ವರರ್ಪಣೆಯಾಗಲು ಸಂಘೋದ್ಘೋಷ ಹೃದಯದಿ […]
ಅವತರಿಸು ಶ್ರೀರಾಮ ಈ ಭರತ ಭುವಿಗೆ| ಉದ್ಧರಿಸಲೀ ಜಗವ ಬಾರಯ್ಯ ಧರೆಗೆ| ಆಗಮಿಸು ಓಗೊಡುತ ಭಾರತದ ಕರೆಗೆ| ಸ್ಪಂದಿಸುತ ಶತಕೋಟಿ ಭಕ್ತರಾ ಮೊರೆಗೆ || ಪ || ಶ್ರೀರಾಮ ಜಯರಾಮ ಕೋದಂಡರಾಮ| ಶ್ರೀರಾಮ ಜಯರಾಮ ಪಟ್ಟಾಭಿರಾಮ|| ತವ ಜನ್ಮಭೂಮಿಯನು ಮುಕ್ತಗೊಳಿಸುವ ಕಾರ್ಯ| ಶತಕಗಳ ಹೋರಾಟ ಆಯಿತನಿವಾರ್ಯ| ಮರೆಯಲಾಪುದೆ ಕಾರಸೇವಕರ ಕೈಂಕರ್ಯ ಸಫಲವಾಯಿತು ಸಂತ ಭೀಷ್ಮ ಸಾರಥ್ಯ || 1 || ಬೆವರು ನೆತ್ತರ ಹರಿಸಿ ಪ್ರಾಣವನೆ ಪಣವಿಟ್ಟು| ಅಸುನೀಗಿದಗ್ರಜರೇ ಎಮಗೆ ಮೇಲ್ಪಂಕ್ತಿ| ದುಷ್ಟಕುಲ ಮರ್ದನಕೆ ರಾಷ್ಟ್ರಸಂರಕ್ಷಣೆಗೆ| ಕೋದಂಡಧರ […]
ಬಂದಾ ಸ್ವಾಮಿ ಬಂದಾ ಶ್ರೀರಾಮ ಬಂದಾ ಅಜ್ಞಾತವಾಸದಿಂದ ಗುಮ್ಮಟದ ಅಡಿಯಿಂದ ಧರ್ಮ ನ್ಯಾಯ ನೀತಿ ಉಳಿಸೆ ರಾಮನೆದ್ದು ಬಂದಾ ಅಯೇೂಧ್ಯ ನಗರಕೆ ಮತ್ತೆ ಬಂದಾ ನಮ್ಮ ಸ್ವಾಮಿ ಬಂದಾ ಶ್ರೀರಾಮಚಂದ್ರ ಪ್ರಭು ಬಂದಾ || ಪ || ಕಷ್ಟಕಾರ್ಪಣ್ಯವನು ಕೊನೆಗಾಣಿಸೆ ಬಂದಾ ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಲು ಶ್ರೀರಾಮ ಬಂದಾ ಕುಣಿಕುಣಿಯುತ ಬಂದಾ ನಲಿನಲಿಯುತ ಬಂದಾ ದೇವರದೇವ ಶ್ರೀರಾಮ ಬಂದಾ || 1 || ಢಮ ಢಮರು ನಾದದಲಿ ಘಂಟೆಯ ನಿನಾದಲಿ ಝೇಂಕರಿಸಿಹ ವೀಣೆಯಲಿ ಮೇೂಳಗುತಿಹ ಶಂಖದಲಿ […]