ಅದ್ಭುತ ಆರಂಭ..ಆರಂಭವೇ ಉಗ್ರ

ಅದ್ಭುತ ಆರಂಭ..
ಆರಂಭವೇ ಉಗ್ರ,
ಹೇಳು ರುಂಡಗಳ ಈ ದಂಡಿಗೆ, ರಣದ ಸಮಯ ಬಂದಿತೆಂದು ಸಾರು ನೀ
ಗರ್ವ, ಘನತೆ, ಹಿರಿಮೆಯನ್ನೊ,
ಇಲ್ಲ ನಿನ್ನ ಜೀವವನ್ನೇ
ಇಂದು ಬಿಲ್ಲು ಬಾಣದಿಂ ಸಮರ್ಪಿಸು
ಭೀಕರ ಆರಂಭ…

ಇಚ್ಛೆಯಂತೆ ಪ್ರಾಣ ತೆಗೆವ
ಇಚ್ಛೆಯಂತೆ ಪ್ರಾಣ ಬಿಡುವ
ವ್ಯಕ್ತಿ ಮಾತ್ರ ಸರ್ವಶಕ್ತಿವಂತನು
ಕೃಷ್ಣ ಕೂಗಿ ಹೇಳುತಿಹುದು
ಭಾಗವತದ ಸಾರವಿಹುದು
ಯುದ್ಧವೇ ವೀರರಿಗೆ ಪ್ರಮಾಣವು

ಕೌರವರ ಗುಂಪೆ ಇರಲಿ
ಪಾಂಡವರ ಗೂಡು ಇರಲಿ
ಹೋರುವವನೇ ಇಲ್ಲಿನ ಮಹಾತ್ಮನು

ಗೆಲುವು ಬೇಕು ಎನಿಸದಿರುವ
ಯಾರನ್ನೂ ಗೆಲ್ಲದಿರುವ
ಅದೆಂಥಾ ಜೀವನಾ, ಧಿಕ್ಕರಿಸು ನೀ
ಸಾವೇ ಕೊನೆಯಾಗದಿರಲು ಸಾವಿಗೇಕೆ ಭೀತಿ ನಮಗೆ,
ಗಗನವೆಲ್ಲಾ ಮೊಳಗುವಂತೆ ಘರ್ಜಿಸು..
ಪ್ರಚಂಡ ಆರಂಭ…

ದಯೆಯ ಭಾವ ಬೇಕೋ ಅಥವಾ, ಶೌರ್ಯದಾ ವಿಕಲ್ಪವೋ
ಸೋಲಿನಿಂದ ಪೆಟ್ಟು ಬೇಕೋ, ಚಿಂತಿಸು
ಅಥವಾ ಪೂರ್ತಿ ತಲೆಯ ಮೇಲೆ, ಉರಿಯುತಿರುವ ವಿಜಯದಗ್ನಿ
ರಕ್ತ ಚೂರ್ಣದಂತೆ ಕೆಂಪು, ಚಿಂತಿಸು
ಕೇಸರಿಯ ಬಣ್ಣವೋ, ಕೇಸರಿಯ ಮೃದಂಗವೋ
ಕೇಸರಿಯ ತಾಳವೋ, ಚಿಂತಿಸು..

ಜೀವನವ ಪ್ರೇಮಗೀತೆಯಂತೆ ಕಾಣೋ ಕವಿಯನ್ನು
ಇಂದು ನೀನು ಪರದೆಯಂತೆ ಸರಿಸಿ ಬಿಡು
ನಾಡಿಗಳಲಿ ಹರಿಯುತಿರವ. ರುಧಿರವನ್ನು ಕುದಿಸುತಿರುವ
ಅಗ್ನಿಜ್ವಾಲೆಯನ್ನು ನೀ ಜ್ವಲಿಸು

ಆರಂಭವೇ ಉಗ್ರ,
ಹೇಳು ರುಂಡಗಳ ಈ ದಂಡಿಗೆ, ರಣದ ಸಮಯ ಬಂದಿತೆಂದು ಸಾರು ನೀ
ಗರ್ವ, ಘನತೆ, ಹಿರಿಮೆಯನ್ನೊ,
ಇಲ್ಲ ನಿನ್ನ ಜೀವವನ್ನೇ
ಇಂದು ಬಿಲ್ಲು ಬಾಣದಿಂ ಸಮರ್ಪಿಸು

ಪ್ರಚಂಡ ಆರಂಭ…
ಪ್ರಚಂಡ ಆರಂಭ…
ಪ್ರಚಂಡ ಆರಂಭ…

(ಕ್ಷಾತ್ರ ಭಾವ,ರಣೋತ್ಸಾಹ,ವೀರರಸ ಉದ್ದೀಪಿಸುವ ಹಿಂದಿ ಹಾಡು ” ಆರಂಭ ಹೈ ಪ್ರಚಂಡ….” ಕನ್ನಡ ಅನುವಾದ)

Leave a Reply

Your email address will not be published. Required fields are marked *