ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲಿ || ಪ ||
ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ
ಎಲ್ಲಿ ಜ್ಞಾನ ಸುಧಾಪಾನ ಎಲ್ಲರಿಗೂ ಸಿಗುವುದೋ || 1 ||
ಎಲ್ಲಿ ಮನೆಯ ಅಡ್ಡಗೋಡೆ ಇಲ್ಲದೆಯೆ ವಿಶಾಲವೋ
ಎಲ್ಲಿ ಮಾತು ಸತ್ಯದಾಳದಿಂದ ಹೊಮ್ಮಿ ಬರುವುದೋ || 2 ||
ಎಲ್ಲಿ ಸತತ ಕರ್ಮ ಪೂರ್ಣಸಿದ್ಧಿ ಪಡೆದು ಮೆರೆವುದೋ
ಎಲ್ಲಿ ತಿಳಿವು ಕಟ್ಟಳೆಯ ಮಳಲ ತೊರೆದು ಹರಿವುದೋ || 3 ||
ಎಲ್ಲಿ ನೀನು ನಮಗೆ ಧೈರ್ಯ ಎಲ್ಲಿ ನೀನು ನಮಗೆ ಸ್ಥೈರ್ಯ
ವರವಿಕಾಸಗೊಳಿಸಿ ಸದಾ ಅಭ್ಯುದಯವ ಕೋರುವೆಯೋ || 4 ||
It’s really very nice song. Fr us in 8th standard B S Ramachar sir thought. So memorable song forver