ನಾ ನಿನ್ನವ ನೀ ನನ್ನವನಾಗು
ಕತ್ತಲು ತುಂಬಿದ ಬಾಳನು ಬೆಳಗು //ಪ//
ತವ ತೇಜೋಮಯ ಜೀವನ ಕಿರಣ,
ಬೆಳಗಲಿ ನಾಡಿನ ಅಂತಃಕರಣ //ಅ.ಪ.//
ನಿನ್ನಯ ಬದುಕಿನ ಪ್ರತಿ ಕ್ಷಣಕ್ಷಣವೂ
ನಿನ್ನ ಶರೀರದ ಕಣ ಕಣ ಕಣವೂ
ರಾಷ್ಟ್ರಯಜ್ಞದಲಿ ಆಹುತಿಯಾಯ್ತು
ತ್ಯಾಗಸಮರ್ಪಣೆ ಮಾದರಿಯಾಯ್ತು //೧//
ಉನ್ನತಪದವಿಯ ಬೆಂಬಲವಿದ್ದರು,
ಹೊನ್ನಿನ ಗಳಿಕೆಯ ಹಂಬಲ ತ್ಯಜಿಸಿ
ಕಟ್ಟಿದೆ ನೀ ಅನುಪಮ ಸಂಘಟನೆ
ಆವರಿಸಿಹುದು ಸಕಲ ಜಗವನೇ //೨//
ಸದ್ಗುಣಗಳ ಗಣಿ ನೀನಾಗಿರುವೆ
ಆದರ್ಶದ ಪಥವನು ನಿರ್ಮಿಸಿಹೆ
ನಿನ್ನಂತೆಯೆ ನಾನಾಗುವ ಆಸೆ
ತೊಟ್ಟಿಹೆ ಘನಸಾಧನೆಯಾ ದೀಕ್ಷೆ //೩//
ಹಿಂದುತ್ವದ ಬಂಧುತ್ವದ ಸೆಲೆಯು
ಹೃದಯಹೃದಯಗಳ ಬೆಸೆಯುವ ಕಲೆಯು
ಸಂಘಶತಾಬ್ದಿಯ ಹೆಮ್ಮೆಯ ಕ್ಷಣವು
ಬರಲಿದೆ ವೈಭವದಾ ಶುಭದಿನವು //೪//