ಗುರಿಯನು ತೋರಿದ ಶ್ರೀಗುರು ಭಗವೆಗೆ ನಮಿಪೆನು ಅನುದಿನ ಅಡಿಗಡಿಗೆ|
ತ್ಯಾಗದ ಶೌರ್ಯದ ಓ ಪ್ರತಿನಿಧಿಯೇ ಸ್ಫೂರ್ತಿಯ ಕರುಣಿಸು ಸಕಲರಿಗೆ||ಪ||
ಧೈರ್ಯವ ತುಂಬುತ ಮೌಢ್ಯವ ಕಿತ್ತೊಗೆ ಧ್ಯೇಯದ ಜಾಗೃತಿ ನೀಡೆಮಗೆ
ಮನದಲಿ ಕವಿದಿಹ ಜಡತೆಯ ನೀಗಿಸಿ ಬೆಳಕನು ಜ್ವಲಿಸು ನಮ್ಮೊಳಗೆ||೧||
ಶುದ್ಧತೆ ನೀಡುತ ಕಲುಷಿತ ಮನಸಿಗೆ ಆದ್ಯತೆ ಕಾರ್ಯದ ಬದ್ಧತೆಗೆ
ಬುದ್ಧಿಮತ್ತೆಯ ಕೊಡು ಜತೆಜತೆ ನಡಿಗೆಗೆ ಸಿದ್ಧಗೊಳಿಸುನೀ ಏಕತೆಗೆ||೨||
ತರತಮವಿಲ್ಲದೇ ರಾಷ್ಟ್ರದ ಕಾರ್ಯಕೆ ಸರಿಸಮ ಭಾವವ ಕೊಡು ಜನಕೇ
ಸರ್ವಸಮರ್ಪಣೆ ಇತ್ತಾ ನೆಲಕೆ ಪರಹಿತವೇ ಗುರಿ ಕಾಯಕಕೆ||೩||