ಕೋಟಿ ಸವಾಲಿಗೆ ಉತ್ತರ ಒಂದೇ ಹಿಂದೂ ಭಾವದ ಜಾಗರಣ
ನಾಡಿದು ಬಯಸಿದೆ ಸಂಕ್ರಮಣ ಉತ್ತರ ಒಂದೇ ಜಾಗರಣ || ಪ ||
ಸೋಲಿನ ದಿನಗಳ ಹಿಂದಕೆ ಸರಿಸಿ ನಲಿವಿನ ನಾಳೆಗೆ ಕದ ತೆರೆದು
ಗೋಳಿನ ಕಥೆಗಳ ಗೊಂದಲ ಮರೆಸಿ ಗೆಲುವಿನ ಪಥದಲಿ ಮುನ್ನಡೆದು
ಏಳಿರಿ ತರುಣರೆ ದನಿಯೊಂದಾಗಿಸಿ ಅರಿಗಳ ದಂಡನು ಸದೆಬಡಿದು || 1 ||
ಶಾರದೆ ನಾಡಿನ ಶಾಪವಿಮುಕ್ತಿ ದ್ವೇಷದ ಹೊಂಚನು ಪುಡಿ ಮಾಡಿ
ರಾಮನ ಕಾರ್ಯದಿ ಮೆರೆದಿದೆ ಭಕ್ತಿ ಅಂಜಿಕೆ ಸಂಚಿಗೆ ಕೊನೆಹಾಡಿ
ಹೊರಳಿದೆ ಬದುಕು ಬೆಳಕಿನ ಕಡೆಗೆ ಗೆಲುವಿನ ಆಸೆಗೆ ಬಲನೀಡಿ || 2 ||
ಸಂಘರ್ಷದ ಕಥೆ ಹೇಳಿದೆ ಚರಿತೆ ತೆರೆದಿದೆ ಅರಿವಿನ ಒಳಗಣ್ಣು
ಭಾರತಮಾತೆಗೆ ವೈಭವ ಮರಳಿದೆ ವಿಜಯವು ನಿಶ್ಚಿತ ನಮಗಿನ್ನು
ಸಂಘದ ಶಕ್ತಿಗೆ ಜಗವಿದು ಒಲಿದಿದೆ ಬದಲಿಸ ಬನ್ನಿರಿ ವಿಶ್ವವನು || 3 ||