ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ
ಭಾವ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ || ಪ ||
ಭಾವ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ || ಪ ||
ಕರದಿ ಸಂಘ ಸೂತ್ರ ಹಿಡಿದು
ಭರದಿ ಹಿಂದು ತೇರನೆಳೆದು
ತರತಮ ವಿಷ ಕಳೆಯ ಕೀಳಿ
ಪರಕೀಯತೆ ಪದರ ಸೀಳಿ
ಸಂಘ ಮಂತ್ರ ಜಪಿಸುತ ಬಂಧು ಭಾವ ಬೆಳೆಸುತ || 1 ||
ತರತಮ ವಿಷ ಕಳೆಯ ಕೀಳಿ
ಪರಕೀಯತೆ ಪದರ ಸೀಳಿ
ಸಂಘ ಮಂತ್ರ ಜಪಿಸುತ ಬಂಧು ಭಾವ ಬೆಳೆಸುತ || 1 ||
ಸ್ವಾರ್ಥ ಭಾವ ದೂರಗೊಳಿಸಿ
ಕೀರ್ತಿ ಮೋಹ ಬದಿಗೆ ಸರಿಸಿ
ಅರಳಿಸುತಲಿ ಶುದ್ಧ ಶೀಲ
ಕೀರ್ತಿ ಮೋಹ ಬದಿಗೆ ಸರಿಸಿ
ಅರಳಿಸುತಲಿ ಶುದ್ಧ ಶೀಲ
ಅರ್ಪಿಸುತಲಿ ಬದ್ಧ ಬಾಳ
ಬನ್ನಿ ತಾಯ ಸೇವೆಗೆ ಉರಿಸಿ ಕಾಯ ದೀವಿಗೆ || 2 ||
ವ್ಯಕ್ತಿ ವ್ಯಕ್ತಿಗಳನು ಬೆಸೆದು
ಭಕ್ತಿ ಶಕ್ತಿಗಳನು ಹೊಸೆದು
ಕುಡಿದು ವೀರವ್ರತದ ಸುಧೆ
ದುಡಿದು ಸೃಜಿಸಿ ಕಾರ್ಯಪಡೆ
ಮಾಡಲಿಹೆವು ನನಸು ನಾಡಿನೇಳ್ಗೆ ಕನಸು || 3 ||