ರಕ್ಷಾಬಂಧನ ರಕ್ಷೆಯ ದ್ಯೋತಕ

ರಕ್ಷಾಬಂಧನ ರಕ್ಷೆಯ ದ್ಯೋತಕ ನಮ್ಮ ನಾಡಿನಾಗ
ತನುಮನಧನದಿ ರಕ್ಷಣೆಯಾಗಲಿ ಹಿಂದು ಭೂಮಿ ಈಗ || ಪ ||

ಹಿಂದು ಭೂಮಿಯ ಮಕ್ಕಳೆಲ್ಲರು ಸೇರಿ ಸಂಘದಾಗ
ರಕ್ಷೆಯ ನೂಲನು ಕಟ್ಟುತ ನಲಿವರು ಸ್ನೇಹ ಜೇನಿನ್ಹಾಂಗ
ಒಂದೇ ನಾಡಿನ ಮಕ್ಕಳು ನಾವು ಭಾವನೆ ಮನದಾಗ || 1 ||

ಹಿಂದು ಭೂಮಿಯ ರಕ್ಷಣೆಗೈಯುವ ಶಪಥ ಹೃದಯದಾಗ
ತ್ಯಾಗ ಪ್ರೇಮಗಳ ಸ್ಫೂರ್ತಿಯ ಸೆಲೆಯಿದು ಬಂಧು ಬಳಗದಾಗ
ಅಣ್ಣ ತಂಗಿಯರ ಪ್ರೇಮದ ಸ್ಪಂದನ ನೂಲಿನ ಎಳೆಯಾಗ || 2 ||

ಅಣ್ಣನ ಬರುವಿಕೆ ಕಾಯುತ ಕೂಡ್ರುವ ತಂಗಿಯ ಅನುರಾಗ
ರಾಖಿಯ ಕಟ್ಟುತ ಅಣ್ಣನ ಕಾಯುವ ಮಿಲನ ಏನು ಸೊಬಗ
ನಾಡಿನ ಸಂಸ್ಕೃತಿ ಭವ್ಯ ಪರಂಪರೆ ಅಡಗಿದೆ ಇದರಾಗ || 3 ||

ಭರತಖಂಡದಾ ಜನಮನ ತಣಿದಿದೆ ಇಂದು ದಾರದಾಗ
ಭಾಷಾ ಭೇದವ ಪಂಥ ಪಂಗಡ ಮರೆತು ದೇಶದಾಗ
ಸಿಖ್ಖ ಮರಾಠಾ ಕನ್ನಡ ಕೇರಳ ಭೇದ ಮರೆಯಿರೀಗ || 4 ||

Leave a Reply

Your email address will not be published. Required fields are marked *