ಸಾರುತಲಿದೆ ಹೊಸ ನೇಸರು ನಾಡಿಗೆ

ಸಾರುತಲಿದೆ ಹೊಸ ನೇಸರು ನಾಡಿಗೆ, ಪರಮ ವೈಭವದ ಆಗಮನ
ಭಾರತ ಮಾತೆಯ ಮಡಿಲನು ಬೆಳಗುವ, ತೀರ್ಥ ಗ್ರಾಮಗಳ ಹೊಂಗಿರಣ
ಗ್ರಾಮ ವಿಕಾಸಕೆ ದುಡಿಯೋಣ, ಸಮೃದ್ಧ ಭಾರತ ಕಟ್ಟೋಣ || ಪ ||

ಹಕ್ಕಿಯ ಕಲರವ ನೀರಿನ ಜುಳುಜುಳು, ಹಸಿರಿನ ವನ ಗೋ ಸಂಪದವು
ಸುಳಿಗಾಳಿಗೆ ತೊನೆದಾಡುವ ತೆನೆಗಳು, ಕರಕೌಶಲಗಳ ಜನಪದವು || 1 ||

ಹುಣ್ಣಿಮೆ ಹರಿದಿನ ಎಳ್ಳಮವಾಸ್ಯೆಗೆ, ಗುಡಿ ಗುಡಿಸಲುಗಳ ಶೃಂಗಾರ
ಚಿಣ್ಣರ ಉಲ್ಲಾಸ-ಬಣ್ಣದ ಹಬ್ಬದಿ, ಮಣ್ಣಿಗು ಚಿನ್ನದ ಚಿತ್ತಾರ || 2 ||

ರೋಗಮುಕ್ತ ಋಣಮುಕ್ತ ಗ್ರಾಮದಿ, ಜಗಳ ವ್ಯಸನಗಳು ದೂರಾಗಿ
ತೊಲಗಲಿ ಭೇದವು ಮೋಸ-ಮತಾಂತರ, ಸಮರಸ ಭಾವವು ನೆಲೆಯಾಗಿ || 3 ||

ಸಂತಶಕ್ತಿಯ ಮಾತೃಶಕ್ತಿಯ, ಯುವಶಕ್ತಿಯ ಒಗ್ಗೂಡಿಸುತಾ
ಸ್ವಾಭಿಮಾನ ಸಂಘಟಿತ ಪ್ರಯತ್ನದಿ, ಸಮೃದ್ಧ ಭಾರತ ಕಟ್ಟೋಣ || 4 ||

Leave a Reply

Your email address will not be published. Required fields are marked *