ನಾಡನು ಕಟ್ಟಲು ಬನ್ನಿ
ಅರಿಗಳ ಮೆಟ್ಟಲು ಬನ್ನಿ
ಹೇಡಿತನವನು ಬಡಿದೋಡಿಸುತಾ ಗುರಿಯನು ಮುಟ್ಟಲು ಬನ್ನಿ || ಪ ||
ನಮ್ಮ ಪರಂಪರೆ ಇತಿಹಾಸ
ಸಾಸಿರ ಸಂತರ ಸಂದೇಶ
ಸ್ಫೂರ್ತಿಯ ಚಿಮ್ಮಿಸಿ ಶಕ್ತಿಯ ಹೊಮ್ಮಿಸಿ
ಮೊಳಗಲಿ ಮಾತೆಯ ಜಯಘೋಷ || 1 ||
ಶೌರ್ಯ ಪರಾಕ್ರಮ ವರ್ಧನೆಗೆ
ಧೈರ್ಯ ಸಾಹಸದ ವರ್ತನೆಗೆ
ಸಂಘಶಕ್ತಿಯಿಂ ದೇಶಭಕ್ತಿಯಿಂ
ರಾಷ್ಟ್ರದ ನಿಜ ಪರಿವರ್ತನೆಗೆ || 2 ||
ಸುತ್ತಲು ರಿಪುಗಳು ಮುತ್ತಿರಲು
ವಿದ್ರೋಹವು ಹೆಡೆ ಎತ್ತಿರಲು
ಜಡತೆಯ ತೊರೆದು ದೃಢತೆಯ ಮೆರೆದು
ಅಂತಿಮ ವಿಜಯವ ಸಾಧಿಸಲು || 3 ||