ಪರಮ ವೈಭವ ಸಾಧನೆ
ನಿನಗದೇ ಅಭಿನಂದನೆ || ಪ ||
ಸ್ವಾರ್ಥತೆಯು ಲವಲೇಶವಿಲ್ಲದ ವಿಮಲಧ್ಯೇಯದ ಮೂರ್ತಿ ನೀನು
ಭರತಭೂಮಿಯ ಭಾಗ್ಯಭಾಸ್ಕರ ಯುವಜನಾಂಗದ ಸ್ಫೂರ್ತಿ ನೀನು || 1 ||
ಕಾಯವದು ಕಾಷಾಯರಹಿತ ಜೀವನವು ಘನತ್ಯಾಗಭರಿತ
ಶಿಷ್ಟ ಉಡುಗೆಯ ಸಂತ ನೀನು, ಕರ್ಮಯೋಗಿ ಮಹಂತ ನೀನು || 2 ||
ದಿವ್ಯಧ್ಯೇಯದ ಪಥದಿ ಕ್ರಮಿಸಿದೆ ಅರೆಕ್ಷಣವು ವಿಶ್ರಮಿಸದೆ
ಪತನಗೊಂಡಿಹ ನಾಡನೆತ್ತಲು ಬಾಳಿನುದ್ದಕು ಶ್ರಮಿಸಿದೆ || 3 ||
ಮನಮನದ ಕಿರುದೆರೆಯ ಮೇಲೆ ಮೂಡಿರಲು ತವ ಭಾವಚಿತ್ರ
ಅನ್ಯಸ್ಮಾರಕವೇಕೆ ನಿನಗೆ ಭಾರತಾಂಬೆಯ ವೀರಪುತ್ರ? || 4 ||