ಭಾರತದ ಬಲವರ್ಧನೆಯೇ
ಎಮ್ಮಯ ಬಾಳಿನ ಆದರ್ಶ
ಧೈರ್ಯದಿ ನಾವ್ ಮುನ್ನಡೆಯುವೆವು
ಸದೃಢ ರಾಷ್ಟ್ರವ ಕಟ್ಟುವೆವು
ಭಾರತಿ ಜೈ ಭಾರತಿ ಭಾರತಿ ಜೈ ಜೈ || ಪ ||
ಛತ್ರಪತಿಯ ಮೇಲ್ಪಂಕ್ತಿಯಿರೆ
ಭುಜದೊಳು ಅಕ್ಷಯ ಶಕ್ತಿಯಿರೆ
ಶತ್ರು ಪಡೆಯ ಪುಡಿಗಟ್ಟುವೆವು
ಸದೃಢ ರಾಷ್ಟ್ರವ ಕಟ್ಟುವೆವು || 1 ||
ಜಾತಿಪಂಥಗಳ ಭಿನ್ನತೆಯ
ಸುಟ್ಟುರಿಸುವೆವು ಖಿನ್ನತೆಯ
ಹಿಗ್ಗುತ ನಾವ್ ಮುನ್ನುಗ್ಗುವೆವು
ಸದೃಢ ರಾಷ್ಟ್ರವ ಕಟ್ಟುವೆವು || 2 ||
ಎದುರಿಸಿ ನೂರು ಸವಾಲುಗಳ
ಕಷ್ಟ ನಷ್ಟಗಳ ಸಾಲುಗಳ
ಶೀಘ್ರದಿ ಗುರಿಯನು ಮುಟ್ಟುವೆವು
ಸದೃಢ ರಾಷ್ಟ್ರವ ಕಟ್ಟುವೆವು || 3 ||