ಮರೆಯದಿರು ರಾಖಿಬಂಧನ್ ಹಿಂದುಗಳ ಐಕ್ಯ ಸಾಧನ್
ಬಂಧುಗಳ ಪ್ರೇಮ ಬಂಧನ್ ಇದೆ ಹಿಂದುರಾಷ್ಟ್ರ ಜೀವನ್ || ಪ ||
ಹಿನ್ನಡೆದ ಹಿಂದುಗಳಲಿ ಹುಮ್ಮಸನು ತುಂಬುತಿಹುದು
ಮೈಮರೆತ ಬಂಧುಗಳಲಿ ತನ್ನರಿವ ಬಿಂಬಿಸಿಹುದು
ಅಭಿಮಾನಪೂರ್ಣ ಜೀವನ್, ಸಾರುತಿದೆ ರಾಖಿ ಬಂಧನ್ || 1 ||
ಹೃದಯಕ್ಕೆ ಹೃದಯ ಬೆರೆಸಿ ನಿಜ ಪ್ರೇಮ ಝರಿಯ ಹರಿಸಿ
ಆಂತರಿಕ ಜ್ಯೋತಿ ಜ್ವಲಿಸಿ ನವ ಸ್ಫೂರ್ತಿಸುಧೆಯ ಸುರಿಸಿ
ಸಂಘಟನ ಮೂಲ ಸಾಧನ್, ಸಾರುತಿದೆ ರಾಖಿ ಬಂಧನ್ || 2 ||
ಸದ್ಧರ್ಮ ಮರ್ಮವರುಹಿ, ಸಂಸ್ಕೃತಿಯ ಸಾರ ತಿಳುಹಿ
ಕೇಶವನ ಮಂತ್ರವರುಹಿ, ಸಂಘಟನ ತಂತ್ರ ತಿಳುಹಿ
ರಾಷ್ಟ್ರೀಯ ಶ್ರೇಷ್ಠ ಜೀವನ್, ಸಾರುತಿದೆ ರಾಖಿ ಬಂಧನ್ || 3 ||
ತುಂಬಾ ಸೊಗಸಾದ ಹಾಡು, ಧನ್ಯವಾದಗಳು ಇದರಲ್ಲಿ ಅಪ್ಲೋಡ್ ಮಾಡಿದ್ದಕ್ಕೆ. ಹೇಳುವ ವಿಧಾನ ಹಾಕಿದಿದ್ದರೆ ಇನ್ನು ಚೆನ್ನಾಗಿರುತ್ತಿತ್ತು
ನಮಸ್ತೇ ಅನುಪ್,
ಆಡಿಯೊ ಅಪ್ಲೋಡ್ ಮಾಡುವ ಕೆಲಸ ನಿರಂತರ ನಡೆಯುತ್ತಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.