ಕೇಶವನ ಜೀವನವು ಎಮಗೆಲ್ಲ ದೀವಿಗೆಯು
ರಾಷ್ಟ್ರಕಾರ್ಯದಿ ಅವ ಮೇರು ಮಾದರಿಯು
ಪರಮವೈಭವ ರಾಷ್ಟ್ರಕೇ ಗುರಿಯಿಟ್ಟನವನು
ಪಥದರ್ಶಕನು ಆದ ಗುರಿಯ ಸಾಧನೆಗವನು || ಪ ||
ಹುರಿದು ಮುಕ್ಕುವ ಬಡತನವ ಬದಿಗೊತ್ತಿ
ಯುವಕರಿಗೆ ತೋರಿದ ಗುರಿಯೆಡೆಗೆ ಕೈಯೆತ್ತಿ
ಪಥಿಕ ಜೊತೆಗೊಯ್ದ ತಾನೆ ನಾವಿಕನಾಗಿ
ಬೆಳಗುವ ಭಾರತದ ಸೂರ್ಯನೇ ತಾನಾಗಿ || 1 ||
ವ್ಯಕ್ತಿಗಳ ಪ್ರೇರಿಸಿ ತಾ ಕರೆತಂದನಂದು
ರಾಷ್ಟ್ರಸೇವೆ ದೀಕ್ಷೆ ನೀಡಿದನು ನಿಂದು
ವ್ಯಕ್ತಿ ವ್ಯಕ್ತಿಯು ಕೂಡೆ ರಾಷ್ಟ್ರಕಾರ್ಯವು ಎಂದು
ಯೋಜಿಸಿ ನಿಲಿಸಿದನು ಸಂಘವೃಕ್ಷವ ಅಂದು || 2 ||
ವೃಕ್ಷವನು ಸೇರಿದವು ನೂರಾರು ಪಕ್ಷಿಗಳು
ಹತ್ತಾರು ದಿಕ್ಕಿನೆಡೆ ಬೀಜದೊಡೆ ಹಾರಿದವು
ಅಲ್ಲಲ್ಲಿ ಬಿತ್ತಿದವು ಸಂಘವೃಕ್ಷದ ಸಸಿಯ
ಕಾಣುವೆವು ನಾವಿಂದು ವೃಕ್ಷ ಬೆಳೆದ ಪರಿಯ || 3 ||