ಜನುಮ ನೀಡಿದ ಜನ್ಮ ಭೂಮಿಯು ಬಸವಳಿದು

ಜನುಮ ನೀಡಿದ ಜನ್ಮ ಭೂಮಿಯು ಬಸವಳಿದು
ದುರುಳರ ಕಿರುಕುಳ ನಲುಗಿ ನಿಂತಿಹುದು
ಸರಿಸಿ ಕತ್ತಲು ದೂರ ಕರೆಯೊ ಕಲಿಪುರುಷ
ಕರ್ಮಯೋಗವು ನಿನ್ನ ಬಳಿಗೆ ಬಂದಿಹುದು || ಪ ||

ಸಾಮ ಬೇಧ ಶತ್ತು ಮಣಿಯದಿರಿ ಭಯವೇನು ?
ಪರಶುರಾಮನ ಶಾಪ ಶರವಿಲ್ಲವೇನು?
ಧೀಮಂತಿಕೆ ರವಿಯು ಮುಳುಗಿ ಹೋಗುವಾಗ
ಧ್ಯೇಯದನುಶಾಸನದಿಂದ ಮರಳಿ ಬರದಿರನೇನು ? || 1 ||

ಪರಕೀಯರಪಹಾಸ್ಯದಾ ಚಿಂತೆ ನಿನಗೇಕೆ ?
ಏಳು ಸಂಸ್ಕೃತಿ ಸೊಬಗ ತೋರುತಲಿ ಜಗಕೆ
ಕೂಡಿಬಾಳುವ ಕವಚ ಒಡೆದು ಕುಸಿದಿರುವಾಗ
ನಡೆಮುಂದೆ ಜೋಡಿಸುತ ಜನಮನವ – ಮನಕೆ || 2 ||

ರಾಷ್ಟ್ರಾಭಿಮಾನವು ಗುರಿ ಸಾಧಿಸಲು ಸಾಕೆ ?
ರಾಷ್ಟ್ರಪುರುಷರ ನಡೆಯು ಅನುಸರಣೆ ಬೇಕು
ಅವರ ನುಡಿಗನುಗುಣದ ಹಾದಿಯಲಿರು ನಿತ್ಯ
ವೈಭವದ ಕಿರಣಗಳು ಮೂಡುವುದು ಸತ್ಯ || 3 ||

Leave a Reply

Your email address will not be published. Required fields are marked *