ಆತ್ಮನಿರ್ಭರ ಭಾರತ ಸ್ವಾಭಿಮಾನವ ಸಾರುತ

ಆತ್ಮನಿರ್ಭರ ಭಾರತ ಸ್ವಾಭಿಮಾನವ ಸಾರುತ
ಜ್ಞಾನ ಭಿಕ್ಷೆಯ ಜಗಕೆ ನೀಡುತ ನಗುತಲಿರಲಿ ಸಂತತ || ಪ ||

ಎಡರು ತೊಡರು ಗಳಿಹುದು ಬಹಳ ಸುಲಭವಲ್ಲವು ಆತ್ಮನಿರ್ಭರ
ದಿಟ್ಟ ಆತ್ಮ ಬಲದಿ ನಡೆಯುತ ಸಾರುವ ನವ ಕ್ರಾಂತಿ ಸಮರ
ಬನ್ನಿರೆಲ್ಲರು ಒಂದಾಗುವ ಗೆಲ್ಲುವ ಈ ಶಾಂತ ಸಮರವ
ಸ್ವಾರ್ಥ ಮರೆತು ರಾಷ್ಟ್ರಕಾಗಿಯೆ ದಿಟದಿ ಜೀವನ ಸವೆಸುವ || 1 ||

ನಮ್ಮ ಏಳ್ಗೆಗೆ ನಾವೇ ಶಿಲ್ಪಿಯು ಎಂದು ತಿಳಿದು ನಡೆಯುವ
ಸತ್ವ ಶಕ್ತಿ ಯುಕ್ತಿಯಿಂದಲಿ ರಾಷ್ಟ್ರದ ಸೇವೆಯ ಮಾಡುವ
ದೇಶದಾರ್ಥಿಕಥೆಯ ಬೆಳೆಸಲು ಬದ್ಧಕಟಿ ನಾವಾಗುವ
ಪರಮವೈಭವ ಸಾಧಿಸುತಲಿ ಭಾರತಾಂಬೆಗೆ ನಮಿಸುವ || 2 ||

4 thoughts on “ಆತ್ಮನಿರ್ಭರ ಭಾರತ ಸ್ವಾಭಿಮಾನವ ಸಾರುತ

  1. ದಯಮಾಡಿ ಈ ಗೀತೆ ರಚನಾಕಾರರನ್ನು ತಿಳಿಸಿ.

  2. if there is an audio clip , easy to study. like himagiriya srunga, vande matharam, arunadhwajavu kareyuthihudu…………etc.

  3. are you having the song
    Hindujage aaj sindhu jage, dhamanire rakthara bindujage, jagruthira …………………………..

Leave a Reply

Your email address will not be published. Required fields are marked *