ತಾಯಿ ಕರೆಯುತಲಿಹಳು ಕಣ್ತೆರೆದು ನೋಡು

ತಾಯಿ ಕರೆಯುತಲಿಹಳು ಕಣ್ತೆರೆದು ನೋಡು
ತನ್ನ ಸಂತತಿಯ ತಾ ಹರಸಲೆಂದು || ಪ ||

ಅಣ್ಣಂದಿರಿರುವಲ್ಲಿ ಅನುಜನಾಗುತ ಬಾಳು
ಎಳೆಯ ಮನಗಳಿಗೆ ನೀ ಹಿರಿಯನಾಗು
ನಭವ ಸೇರಿದ ಮೇಘ ಮಳೆಯಾಗುವಾ ತೆರದಿ
ನಾನೆಂಬ ಭಾವವನು ಕಳಚಿ ಹೋಗು || 1 ||

ಅದು ಏಕೆ? ಇದು ಏಕೆ? ಸಂದೇಹವನು ತೊರೆದು
ಶುದ್ಧ ಭಾವವ ಮನದಿ ತಳೆದು ಸಾಗು
ನೀರ ಸ್ಪರ್ಶದಿ ಭೂಮಿ ಹಸಿರುಡುಗೆ ತೊಡುವಂತೆ
ಸಂಸ್ಕೃತಿಯ ಸಿಂಚನದಿ ಧ್ಯೇಯಿಯಾಗು || 2 ||

ಮನದ ದೌರ್ಬಲ್ಯವನು ಹರಿದೊಗೆದು
ಸಂಕುಚಿತ ಭಾವವನು ದೂರ ದೂಡು
ಜಯದ ಹಂಬಲ ಬಿಡದೆ ಸಾಗು ಮುಂದಕೆ ಸಾಗು
ಹನಿ ಹನಿ ಹಿಂದುಗಳ ಒಂದು ಮಾಡು || 3 ||

Leave a Reply

Your email address will not be published. Required fields are marked *