ಹಿಂದು ರಾಷ್ಟ್ರದ ಸಂತಾನರು ನಾವು ಹಿಂದು ವೀರರು ನಾವು
ಜೀವನ ನಮ್ಮದು ನಂದಾ ದೀಪವು ಸಕಲವು ತಾಯಿಗೆ ಅರ್ಪಿತವು || ಪ ||
ಋಷಿಗಳ ವಾಣಿ ಮನ ಮನದಲ್ಲಿ ತ್ಯಾಗ ಬಲಿದಾನದ ಬದುಕಲ್ಲಿ
ಸಾಹಸ ಶೌರ್ಯದ ಸಂಕಲ್ಪದ ಪಥ ಸಾಗಿದೆ ಕ್ಷಾತ್ರತೇಜದ ಕರ್ಮರಥ || 1 ||
ಭಾರತ ಮಾತೆಯ ಭರತರು ನಾವು ಸಿಂಹದ ಜೊತೆ ಒಡನಾಟ
ಗಂಗಾಮಾತೆಯ ಗಾಂಗೇಯರು ನಾವು ಮುಷ್ಠಿಯಲೀ ವಿಶ್ವಪಟ || 2 ||
ಸ್ವಾಭಿಮಾನ ಸಂಪನ್ನ ರಾಷ್ಟ್ರವೇ ಕ್ಷಣ ಕ್ಷಣ ಜೀವನದ ಗಂಧ
ವಿಶ್ವಗುರು ತಾಯಿ ಭಾರತಿಯೇ ಎಲ್ಲೆಡೆ ಹರಡಲಿ ಆನಂದ || 3 ||
ಸುಂದರ ಸಮಾಜದ ಕನಸು ಸಮರಸಭಾವದ ವಸುಂಧರಾ
ಕೇಶವ ಮಾಧವರಾ ಸ್ಮರಿಸು ಕನಸಿನ ಸಾಕಾರಕೆ ಆಧಾರ || 4 ||