ಸಂಘ ಸಂಜೀವಿನಿಯ ಜನಕಿತ್ತ ಕೇಶವನೇ

ಸಂಘ ಸಂಜೀವಿನಿಯ ಜನಕಿತ್ತ ಕೇಶವನೇ
ನಿನಗಿದೋ ನಮ್ಮಯ ಶತಕೋಟಿ ನಮನ || ಪ ||

ಪರದಾಸ್ಯ ಪರತತ್ವ ಯುವ ಮನವ ತುಂಬಿರಲು
ರಾಷ್ಟ್ರಭಕ್ತಿಯ ಭಾವ ಅರಳಿಸಿದೆ ನೀನು
ಜಾತಿ ಮತದ ನೆವದಿ ದೇಶ ಚೂರಾಗಿರಲು
ಹಿಂದು ಎನ್ನುವ ಭಾವ ಮರಳಿಸಿದೆ ನೀನು || 1 ||

ಬಾಳ ಬೇವನು ಉಂಡು ನಮಗೆ ಬೆಲ್ಲವನಿತ್ತು
ಭಾರತದ ವೈಭವದ ಕನಸು ಕಂಡೆ
ವಾದ ಭೇದವ ಬಿಟ್ಟು ಪ್ರೇಮಸೌಧವ ಕಟ್ಟಿ
ಬರಿಗೈಲಿ ಬಹುಜನರ ಬರಸೆಳೆದುಕೊಂಡೆ || 2 ||

ಅಂದು ನೀನಿಟ್ಟ ಸಂಘದಾ ಸಸಿಯಿಂದು
ಬೆಳೆದು ನಿಂತಿದೆ ರೆಂಬೆ ಕೊಂಬೆಯನು ಚಾಚಿ
ನಾಳೆ ಹೂಗಳ ತಳೆವ ಇಂದಿನ ವೃಕ್ಷಕ್ಕೆ
ನಿನ್ನೆ ನೀರೆರೆದೆ ಪ್ರೇರಣೆಯ ರೀತಿ || 3 ||

Leave a Reply

Your email address will not be published. Required fields are marked *