ದೇಶ ದೇಶ ದೇಶ ದೇಶ ದೇಶ ನನ್ನದು

ದೇಶ ದೇಶ ದೇಶ ದೇಶ ದೇಶ ನನ್ನದು
ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು           || ಪ ||

ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ
ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ
ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು
ಎಲ್ಲ ನನ್ನದು, ಎಲ್ಲ ನನ್ನದು                 || 1 ||

ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು
ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ
ಬೆಳೆದು ನಿಂತ ವನಸಿರಿಯು, ಕಂಗೊಳಿಪ ಬೃಂದಾವನ
ಎಲ್ಲ ನನ್ನದು, ಎಲ್ಲ ನನ್ನದು                || 2 ||

ನರಹರಿಯ ಪಾಂಚಜನ್ಯ, ವಾಲ್ಮೀಕಿಯ ರಾಮಾಯಣ
ವೇದಗಳ ಉದ್ಘೋಷ ಮಂತ್ರತಂತ್ರ ಆವಾಸ
ಕಿವಿಯ ಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ
ಎಲ್ಲ ನನ್ನದು, ಎಲ್ಲ ನನ್ನದು                 || 3 ||

ವ್ಯಾಸ ಭಾಸ ಕಾಳಿದಾಸ ಬುದ್ಧ ಬಸವ ಕನಕದಾಸ
ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ
ತಾಯಿ ಮಡಿಲ ಮುಗುಳುನಗೆ ಕೋಟಿ ತುಟಿಯ ಮಂದಹಾಸ
ಎಲ್ಲ ನನ್ನದು, ಎಲ್ಲ ನನ್ನದು               || 4 ||

4 thoughts on “ದೇಶ ದೇಶ ದೇಶ ದೇಶ ದೇಶ ನನ್ನದು

  1. ಭಾರತ ಮಾತೆಗೆ ನನ್ನ ಸಾಷ್ಟಾಂಗ ನಮನಗಳು

Leave a Reply

Your email address will not be published. Required fields are marked *