ಅರಿತು ಬಂದೆವು ಸಂಘದ ಶಕ್ತಿಯ ಕಾರ್ಯ ದಿಶೆಯನ್ನು
ಬೆರೆತು ಬಾಳುವ ಮಾತೆಯ ಸೇವೆಗೆ ಸವೆಸುತ ತನುವನ್ನು || ಪ ||
ಪುಣ್ಯದ ಮಣ್ಣಿನ ಕಣ ಕಣ ಕಾಯುವ ಕಾಯಕವನು ತೊಟ್ಟು
ಸಂಘದ ಕಾರ್ಯವೇ ಈಶ್ವರೀ ಕಾರ್ಯವು ಎನ್ನುವ ಪಣತೊಟ್ಟು
ಪಾವನ ಭೂಮಿಯ ಪರಮ ವೈಭವದ ಗುರಿಯನು ಮುಂದಿಟ್ಟು || 1 ||
ಮದ ಮಾತ್ಸರ್ಯದ ಪದರವ ಸೀಳುತ ಪದವನು ಮುಂದಿಡುತ
ತರ ತಮ ಭಾವವ ಮನದಿಂ ತ್ಯಜಿಸುತ ಸರಿ ಸಮ ನಾವೆನುತ
ರಾಷ್ಟ್ರದ ಕೀರ್ತಿಯ ವಿಶ್ವಕೆ ಹಬ್ಬಲು ಕರವನು ಜೋಡಿಸುತ || 2 ||
ಕಾರ್ಯ ಸಿದ್ದಿಗೆ ಪ್ರಸಿದ್ಧಿಗೆ ಬಯಸದೆ ಧೈರ್ಯದ ಪಥವಿಡಿದು
ನನದೇನಿಲ್ಲ ಎಲ್ಲವೂ ನಿನ್ನದೇ ಎನ್ನು ವ್ರತ ಹಿಡಿದು
ಅಗಣಿತ ಸೇವೆಯ ಸುಮವನು ತಾಯಿಯ ಪದತಳಕೆ ಸುರಿದು || 3 ||