ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ || ಪ ||
ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು
ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು
ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ
ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ || 1 ||
ಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು
ಮನ ಮಾಡಿಂದು ದುಡಿಯಲು ಬಂಧು ಉತ್ಸಾಹದಿನಿಂದು
ಪುಣ್ಯದ ಮಣ್ಣಿದು ಬೆಳೆಸಲು ಬಾ ಬಂಗಾರದ ಬೆಳೆಯನ್ನು
ಬೆವರಿನ ಹೊಳೆಯೇ ಹರಿಯಲಿ ಇಂದು ಕೊಚ್ಚುತ ಕೊಳೆಯನ್ನು || 2 ||
ಕೊಲೆ ಸುಲಿಗೆಗಳ ಅತ್ಯಾಚಾರದ ಕೊನೆಯಾಗಲಿ ಇಂದು
ಸ್ನೇಹದ ಪ್ರೇಮದ ಭ್ರಾತೃತ್ವದ ಸೆಲೆ ಹರಿಯಲಿ ಎಂದೆಂದು
ಕುಡಿಯುವುದೊಂದೇ ಜಲ ಉಸಿರಾಡುವುದೊಂದೆ ಗಾಳಿ
ಹರಿಯುವುದೊಂದೇ ರಕ್ತವು ನಮ್ಮಲಿ ಭೇದವು ಏಕಾಗಿ || 3 ||
typing mistake
Wrong: ಮನ ಮಾಡಿಂದು ದುಡಿಯಲು ಬಂಧು ಉತ್ಸಾಹದಿನಿಂದು
Correct: ಮನ ಮಾಡಿಂದು ದುಡಿಯಲು ಬಂದು ಆಲಸ ಬಿದುತಿಂದು.