ಸ್ಫೂರ್ತಿಯ ಚಿಲುಮೆಯಿದು ಎಂದಿಗೂ

ಸ್ಫೂರ್ತಿಯ ಚಿಲುಮೆಯಿದು ಎಂದಿಗೂ

ಸಾಧಕ ಜನರಿಗೆ ಪ್ರೇರಣೆ ನೀಡುವ             || ಪ ||

 

ಸಾವಿಗೆ ಅಂಜದೆ ಸೋಲಿಗೆ ಬೆದರದೆ

ಚಿರಸ್ಥಿರ ಚಿತ್ತದಿ ಸ್ಫೂರ್ತಿಯ ನೀಡಿದ

ಧರ್ಮೋನ್ನತಿಯಾ ಮುಕ್ತಿಯ ಪಥವನು

ನಿಜಜೀವನದೊಳು ಸಾಧಿಸಿ ಬೆಳಗಿದ           || 1 ||

 

ದೇಹದ ಕಣಕಣ ಜೀವನ ಕ್ಷಣಕ್ಷಣ

ಬತ್ತಿಯ ತೆರದಲಿ ಉರಿಸುತ ಜ್ವಲಿಸಿದ

ಧ್ಯೇಯದ ದೀಪ್ತಿಯ ಅಗಣಿತ ಮನದಲಿ

ಬೆಳಗಿಸಿ ಬದುಕನು ಸಾರ್ಥಕಗೊಳಿಸಿದ         || 2 ||

 

ಗುರುಕುಲ ಸಂಸ್ಕೃತ ಭಾರತ ದರ್ಶನ

ಕೃಷಿ ಪರಿವಾರದ ಕಲ್ಪನೆಯನು

ವಿಶ್ವಕುಟುಂಬದ ಪ್ರಬೋಧನೆಯ ಪರಿ

ಹಿಂದುವಿನುನ್ನತಿ ದಾರಿಯ ತೋರಿದ          || 3 ||

Leave a Reply

Your email address will not be published. Required fields are marked *