ಏಕತೆ ಸಾರುವ ಸೂತ್ರದಿ ಸೇರುವ
ಬನ್ನಿರಿ ಭೋಗವ ತ್ಯಜಿಸುತಲಿ
ಭಾರತ ಮಾತೆಯ ಚರಣದ ಸೇವೆಗೆ
ದಣಿಯದ ಶಕ್ತಿಯ ಗಳಿಸುತಲಿ || ಪ ||
ಅನುಪಮ ಕಾರ್ಯಕೆ ಅರ್ಪಿತ ಬದುಕಿನ
ಜೀವನ ಮೌಲ್ಯವ ಬೆಳೆಸುತಲಿ
ತರತಮ ಭಾವದ ಕತ್ತಲ ನೀಗಿ
ಮಾನವ ಸ್ವರ್ಗವ ಸೃಜಿಸುತಲಿ || 1 ||
ದೇಹದ ಗುಡಿಯಲಿ ಧ್ಯೇಯವು ಬೆಳಗಲಿ
ದ್ವೇಷ ಅಸೂಯೆಗೆ ಎಡೆಗೊಡದೆ
ಕಾಯಕೆ ದೃಢತೆಯ ಚಿತ್ತಕೆ ಸ್ಫೂರ್ತಿಯ
ತುಂಬುವ ಸಂಘದ ನೆಲೆ ಬಿಡದೆ || 2 ||
ಸಮರದ ಕಲಿಗಳ ಸಾಧಕ ಸಂತರ
ಶಸ್ತ್ರ ಶಾಸ್ತ್ರಗಳ ತೊರೆಯದಿರಿ
ಕೇಶವ ಮಾಧವ ತೋರಿದ ಮಾರ್ಗದಿ
ಸಾಗುತ ಗುರಿಯನು ಮರೆಯದಿರಿ || 3 ||