ದಶಮಾನದ ಸಂಭ್ರಮ ದಶಮಾನದ ಸಂಭ್ರಮ
ಕೇಶವನಾ ಹರಕೆಯಿಂದ ಲೋಕಹಿತದ ಬಯಕೆಯಿಂದ
ರೂಪುಗೊಂಡ ಕುಂಜಕೆ ಪ್ರೇರಣೆಯ ಪುಂಜಕೆ
ದಶಮಾನದ ಸಂಭ್ರಮ ದಶಮಾನದ ಸಂಭ್ರಮ || ಪ ||
ಬೆಳಗು ಸಂಜೆ ಭಗವೆರಶ್ಮಿ ಮಂಗಲಮಯ ಪರಿಸರ
ತೆರೆದ ಬಯಲು ಸೆಳೆವ ನಿಲುವು ನೋಟವಿದು ಮನೋಹರ
ವರವಿಶಾಲ ಕುಂಜಕೆ ಬೆಳಕಿನೊಂದು ಪುಂಜಕೆ || 1 ||
ಬಾಲಮನಕೆ ಮೋದವೆರೆದು ತರುಣರೆದೆಗೆ ಸ್ಫೂರ್ತಿಯ
ಹಿರಿಯರೊಲಿದು ಹರಸುವಂತೆ ಬರೆದು ಮೇಲುಪಂಕ್ತಿಯ
ಗರಿಮೆ ಪಡೆದ ಕುಂಜಕೆ ಚೈತನ್ಯದ ಪುಂಜಕೆ || 2 ||
ಹಸಿರು ಹೊತ್ತ ಹೂಗಿಡ ಮರ, ಮಾತೃಕೇಂದ್ರ ಶಿಶುಮಂದಿರ
ಗ್ರಂಥಾಲಯ ಕಾರ್ಯಾಲಯ ಸಂಚಾರಿ ಚಿಕಿತ್ಸಾಲಯ
ಹಬ್ಬಿ ಬೆಳೆದ ಕುಂಜಕೆ ವಿಮಲ ಯಶೋಪುಂಜಕೆ || 3 ||
‘ಕಾಯಕವೇ ಕೈಲಾಸ’ವ ಕರ್ಮರಂಗಕಿಳಿಸುವ
ಇವ ನಮ್ಮವ, ಇವ ನಮ್ಮವ- ಸದ್ವಿಚಾರ ಮಂಟಪ
ಮುಕ್ತಹೃದಯ ಕುಂಜಕೆ ಸಾತ್ವಿಕತೆಯ ಪುಂಜಕೆ || 4 ||
ದೇಶಹಿತವೆ ಧ್ಯೇಯಸುಮನ ರಾಷ್ಟ್ರಭಕ್ತಿ ಗುಂಜನ
ನಿಜಸಮಾಜಸೇವೆ ಸ್ನೇಹ-ಸಂಘಭಾವ ಸಿಂಚನ
ನಿರತ ನಡೆವ ಕುಂಜಕೆ ಪೂರ್ಣಪ್ರಭೆಯ ಪುಂಜಕೆ || 5 ||
(ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಕಾರ್ಯಾಲಯ ‘ಕೇಶವಕುಂಜ್’ ದಶಮಾನೋತ್ಸವ ಕಾರ್ಯಕ್ರಮಕ್ಕಾಗಿ ಬರೆದ ಗೀತೆ)