ದೇಶ ಒಂದೆ ಧ್ಯೇಯ ಒಂದೆ
ಭಾಷೆ ನೂರು ಭಾವ ಒಂದೆ
ನನ್ನ ಹೆಮ್ಮೆಯ ನಾಡಿದು
ಮನ ತಣಿಸೆ ಚೆಲುವ ಬೀಡಿದು || ಪ ||
ಸಿಂಧೂನದಿಯ ಮಣ್ಣಿನಿಂದ
ಹಿಮಾಲಯದ ತಪ್ಪಲಲ್ಲೂ
ಕಾಶ್ಮೀರದ ಕಣಿವೆಯಿಂದ
ಕನ್ಯಾಕುಮಾರಿಯಲ್ಲೂ
ಸೇವೆಯೆಂಬ ಯಜ್ಞದಲ್ಲಿ
ಭಾರತಾಂಬೆಯ ಗೆಲುವಿಗಾಗಿ
ಪ್ರಾಣರಾಷ್ಟ್ರಕೆ ಅರ್ಪಿತ
ಬದುಕು ದೇಶಕೆ ಸಮರ್ಪಿತ || 1 ||
ಕೆಂಪು ಕಪ್ಪು ಮಣ್ಣಿದು
ಹಸಿರು ಹೊತ್ತ ನಾಡಿದು
ಗೌರಿ ಶಂಕರ ಶಿಖರವಿಹುದು
ನೂರು ನದಿಯ ಭುವಿಯಿದು
ಕೋಟಿ ದೇವರಿರುವರು
ಭೇದಭಾವ ಮರೆವರು
ಅನ್ನುತ್ತನ್ನುತನ್ನುತಾ
ನಾವೆಲ್ಲ ಒಂದು ನಾವೆಲ್ಲ ಹಿಂದು || 2 ||
ಸಾಧು ಸಂತರ್ಹುಟ್ಟಿಬೆಳೆದು
ವೇದಗಾನ ಮೊಳಗುತಿಹುದು
ಹರಿವುದೊಂದೆ ರಕ್ತವು
ತಾರತಮ್ಯ ತೊರೆದೆವು
ಐಕ್ಯಮಂತ್ರ ಒಂದೆ ಒಂದೆ
ನಮ್ಮ ತಾಯಿ ಭಾರತಾಂಬೆ || 3 ||
ರಾಜರಾಜರಾಳಿದ
ವೀರಭೂಮಿ ಈ ಧರೆ
ಶಾಂತಿಮಂತ್ರ ಜಪಿಸಿದ
ಪುಣ್ಯಭೂಮಿ ಈ ಧರೆ
ಅಖಂಡ ಹಿಂದುಸ್ಥಾನವು
ವಿಶ್ವಮಾನ್ಯ ಮರೆಯೆವು
ರಾಮನಾಮ ಜಪಿಸುತ
ಅಮರ ನಮ್ಮ ಭಾರತ || 4 ||