ಮಾತೆ ನಿನ್ನಯ ದಿವ್ಯ ಚರಣಕೆ
ನಮ್ಮ ಕಾಯವು ಬೀಳಲಿ
ಶೌರ್ಯ… ತ್ಯಾಗದ ಸಂಗಮದಲಿ
ಜಗದ ಉನ್ನತಿಯಾಗಲಿ
ವಿಶ್ವವೇ ತಲೆಬಾಗಲಿ… || ಪ ||
ದೇಶಭಕ್ತಿಯು ಪ್ರಕಟವಾಗಲಿ
ತೊರೆದು ಮನಸಿನ ಆಮಿಷ
ತೋಳಶಕ್ತಿ ಬಲಾಢ್ಯವಾಗಲಿ
ವ್ಯಕ್ತವಾಗುತ ಪೌರುಷ
ವೀರತನವಿದು ದೇಶಕೋಸ್ಕರ,
ಹಾರಿ ಮುಟ್ಟಲು ಆಗಸ
ವೈರಿ ನಾಶದಿ ಸಂತಸ… || 1 ||
ನಮ್ಮ ಹಿರಿಯರ ಕನಸಿನಂತೆ
ಭಾರತಿಯು ತಲೆಯೆತ್ತಲಿ
ಕಡಲ ಅಲೆಗಳ ಓಟದಂತೆ
ದೇಶಕಾರ್ಯವು ಸಾಗಲಿ
ಹಿಂದು ಕಲಿಗಳ ಶಕ್ತಿಯಿಂದ
ಶತ್ರು ಕಾಯವು ಬೀಳಲಿ
ಅಂಧಕಾರವು ತೊಲಗಲಿ… || 2 ||
ಸುಮ್ಮನಿದ್ದರೆ ಕಾರ್ಯವಾಗದು
ಹೃದಯ ಮಿಡಿಯಲಿ ಕ್ಷಣ ಕ್ಷಣ
ಏಕೆ ಬೇಕಿದೆ ಘೋರ ಮೌನವು
ಮಾತೆಗೆಲ್ಲ ಸಮರ್ಪಣ
ಎದ್ದು ನಿಲ್ಲುವ ಶಕ್ತಿಗಾಗಿ
ಬರಲಿದೆ ನವಚೇತನ
ಸಂಘ ಶಕ್ತಿಯ ದರ್ಶನ… || 3 ||