ವಿಶ್ವಕೆ ಭಾರತವಿತ್ತ ಕೊಡುಗೆಯು
ಮಾನವ ಮಾಧವನಾಗುವ ಬಗೆಯು
ಅನುಪಮ ಯೋಗ ಪ್ರಯೋಗ
ಅಮರತ್ವದ ಸಹಯೋಗ || ಪ ||
ಚಿತ್ತದ ಚಂಚಲತೆಗೆ ಕಡಿವಾಣ
ಸಾರ್ಥಕ ಬದುಕಿಗೆ ಇದು ಸೋಪಾನ
ಹೊಮ್ಮಿಸಿ ನವಚೈತನ್ಯದ ಹೊನಲು
ಅಕ್ಷಯ ಆತ್ಮಾನಂದದ ಮಜಲು || 1 ||
ಹೊರನೋಟಕೆ ಇದು ಬರಿ ವ್ಯಾಯಾಮ
ಆಳದಿ ಅದ್ಭುತಶಕ್ತಿಯ ಧಾಮ
ತನುಮನಗಳ ಸ್ವಾಸ್ಥ್ಯಕೆ ಸಹಕಾರಿ
ಆಧ್ಯಾತ್ಮದ ಸಿದ್ಧಿಯ ರಹದಾರಿ || 2 ||
ಅಷ್ಟಾಂಗದ ಅಲುಗದ ಅಡಿಪಾಯ
ಉತ್ತುಂಗದ ಸಾಧನೆಯ ಉಪಾಯ
ಯೋಗದ ಪ್ರಭೆ ಚಿರಕಾಲ ಬೆಳಗಲಿ
ಮನುಕುಲವನು ಸತ್ಪಥದಿ ನಡೆಸಲಿ || 3 ||