ಮನುಕುಲದುಳಿವಿಗೆ ಮನುಜತೆಯೇಳ್ಗೆಗೆ

ಮನುಕುಲದುಳಿವಿಗೆ ಮನುಜತೆಯೇಳ್ಗೆಗೆ |
ಇರುವುದೊಂದೇ ದಾರಿ ಹಿಂದುತ್ವದ ಹೆದ್ದಾರಿ || ಪ ||

ಮೇದಿನಿಯೊಡಲಿನ ಬೇಗೆಯ ತಣಿಸಲು
ರೋಷದ್ವೇಷಗಳ ಬೆಂಕಿಯ ಮಣಿಸಲು
ಬಂಧುತ್ವದ ಸವಿ ಅಮೃತ ಉಣಿಸಲು
ಇರುವುದೊಂದೇ ದಾರಿ ಹಿಂದುತ್ವದ ಹೆದ್ದಾರಿ || 1 ||

ಚಲಿಸಿದೆ ವಿಶ್ವ ವಿನಾಶದ ಕಡೆಗೆ
ಪ್ರಗತಿಯ ಹೆಸರಲಿ ಪತನದ ಎಡೆಗೆ
ಅಜ್ಞಾನದ ಅಧ್ವಾನದ ತಡೆಗೆ
ಇರುವುದೊಂದೇ ದಾರಿ ಹಿಂದುತ್ವದ ಹೆದ್ದಾರಿ || 2 ||

ಉಗ್ರವಾದಿಗಳ ಭೀಕರ ಕೃತ್ಯ
ಬರ್ಬರತೆಯ ಪೈಶಾಚಿಕ ನೃತ್ಯ
ತಡೆಗಟ್ಟುವುದೆಮ್ಮಯ ಕರ್ತವ್ಯ
ಇರುವುದೊಂದೇ ದಾರಿ ಹಿಂದುತ್ವದ ಹೆದ್ದಾರಿ || 3 ||

ಎದುರಾದರೂ ಸಾಸಿರ ಅಡೆತಡೆಯು
ಮುನ್ನುಗ್ಗಲಿ ಯುವ ಶಕ್ತಿಯ ಪಡೆಯು
ನಮ್ಮಯ ಗಮ್ಯ ದಿಗಂತದ ಗಡಿಯು
ಇರುವುದೊಂದೇ ದಾರಿ ಹಿಂದುತ್ವದ ಹೆದ್ದಾರಿ || 4 ||

Leave a Reply

Your email address will not be published. Required fields are marked *