ವರವ ಬೇಡುವೆ ಹರಸು ನಮ್ಮ|
ಭಾರತೀ ಕೊಡು ಕೋಟಿ ಜನುಮ || ಪ ||
ಶಸ್ತ್ರಕೊಡು ತೋಳಲ್ಲಿ ಬಲವಿಡು|
ವೈರಿಕುಲ ಮರ್ದನಕೆ ಛಲಕೊಡು|
ವರದೆ ಪಾರ್ವತಿ ತಾಯೆ ನೀಡು|
ನಿನ್ನ ಬಸಿರೊಳಸಂಖ್ಯ ಜನುಮ || 1 ||
ಅನ್ನದಾಯಿನಿ ಜಗನ್ಮಾತೆ|
ಜ್ಞಾನದಾಯಿನಿ ದಿವಿಜ ಪೂಜಿತೆ|
ಆದಿಶಕ್ತಿ ಸುಧೀರಮಾತೆ|
ಮುಕ್ತಿಮಂತ್ರವೆ ನಿನ್ನ ನಾಮ || 2 ||
ಮಾತೃಭಕ್ತಿ ಪುನೀತಭಾವನ|
ದೀಪ್ತಗೊಳ್ಳಲಿ ಸುಪ್ತಚೇತನ|
ಚಿರಸಮರ್ಪಿತವೆಮ್ಮ ತನುಮನ|
ಚಿರಸಮರ್ಪಿತ ಪೂರ್ಣ ಜೀವನ || 3 ||