ಮಾತೆ ಶ್ರೀ ಭಾರತೀಯ ಸಂಸ್ಕೃತಿ
ಅರಿವಿನಲಿ ಎದೆ ತುಂಬುವಾ
ತಾಯಿನಾಡಿನ ಐಕ್ಯ ದರ್ಶನ
ಪಡೆದು ಮಾತೆಗೆ ನಮಿಸುವಾ || ಪ ||
ಯಾವ ಜಾತಿಯದಾದರೇನೈ
ಎಲ್ಲ ಪೂಜೆಯು ಮುಕ್ತಿಗೆ
ಯಾವ ಗರಡಿಯದಾದರೇನೈ
ಎಲ್ಲ ಸಾಧನೆ ಶಕ್ತಿಗೆ || 1 ||
ಯಾವ ಪ್ರಾಂತ್ಯದ ಭಾಗವೇನ
ಎಲ್ಲ ಮಣ್ಣು ಭಾರತ
ಯಾವ ಬಾಯಿಯ ಹೇಗೆ ನುಡಿಯಲಿ
ಅರ್ಥ ಮುಖ್ಯವು ಅವಿರತ || 2 ||
ದೇಶಭಕ್ತಿಯ ದೈವಶಕ್ತಿಯ
ತುಂಬಿ ಎದೆಎದೆ ಉಕ್ಕಲಿ
ಮಾನವೀ ಸಮರಸದ ಬಾಳುವೆ
ಭಾಗ್ಯ ಭಾರತಿ ಅರಳಲಿ || 3 ||