ಮಧುಮಾರ್ಗವಿರಲಿ :: madhumaargavirali

ಮಧುಮಾರ್ಗವಿರಲಿ, ಈ ಸಾಧನೆಯ ಪರ್ವದಲಿ
ತನುವಾಗಿ ಮನವಾಗಿ ಅವ ತುಂಬಿ ಬರಲಿ ||ಪ||

ಸೀಳೊಡೆದ ಬಿರುಸ್ವರವು ಮೊರೆದು ಕೇಳಿಹ ಕಾಲ
ತಾಯೊಡಲ ಮುಡಿಗಳಲಿ ಪರದುರುಳ ಜಾಲ
ಅಂಜುವೆದೆ ನಮದಲ್ಲ ಅವನೆಂದ ನುಡಿಗಳ
ನಿಜವಿಂದು ಮಾಡುವೆವು ಎದುರಿಸಿ ಸವಾಲುಗಳ ||೧||

ಪರಜಾತಿ ಕಿರಿಜಾತಿ ಮನದಿ ಕುಣಿದಿಹ ಗಳಿಗೆ
ತರತಮವು ದೇವರಿಗೂ ಬಿಡರು ಗುಡಿಯೊಳಗೆ
ಹಿಂದು ಪತಿತನು ಅಲ್ಲ ಎಂಬವನ ನಂಬಿಕೆ
ಒಂದಾಗಿ ಸಾಕಾರಗೊಳಿಸುವೆವು ಇಂದಿಗೆ ||೨||

ಜಾಗರಣ ಮನೆಮನೆಗೆ ಮೂಡಿಸುವ ಹೊತ್ತು
ವಿಸ್ತರಣ ಜನಮನಕೆ ಸಂಘದ ಮಹತ್ತು
ಸರ್ವವು ಸಮಾಜಕೇ ಸ್ವಂತಕ್ಕೆ ಇನಿತೂ
ತೋರುವೆವು ಋಷಿನುಡಿ ಶ್ರಮಸಮಯ ತೆತ್ತು ||೩||

madhumaargavirali, I sAdhaneya parvadali
tanuvAgi manavAgi ava tuMbi barali            ||pa||

sILoDeda birusvaravu moredu kELiha kAla
tAyoDala muDigaLali paraduruLa jAla
aMjuvede namadalla avaneMda nuDigaLa
nijaviMdu mADuvevu edurisi savAlugaLa        ||1||

parajAti kirijAti manadi kuNidiha gaLige
taratamavu dEvarigU biDaru guDiyoLage
hiMdu patitanu alla eMbavana naMbike
oMdAgi sAkAragoLisuvevu iMdige            ||2||

jAgaraNa manemanege mUDisuva hottu
vistaraNa janamanake saMGada mahattu
sarvavu samAjakE svaMtakke initU
tOruvevu RuShinuDi Sramasamaya tettu        ||3||

Leave a Reply

Your email address will not be published. Required fields are marked *