ಬಂದಾ ಸ್ವಾಮಿ ಬಂದಾ ಶ್ರೀರಾಮ ಬಂದಾ
ಅಜ್ಞಾತವಾಸದಿಂದ ಗುಮ್ಮಟದ ಅಡಿಯಿಂದ
ಧರ್ಮ ನ್ಯಾಯ ನೀತಿ ಉಳಿಸೆ ರಾಮನೆದ್ದು ಬಂದಾ
ಅಯೇೂಧ್ಯ ನಗರಕೆ ಮತ್ತೆ ಬಂದಾ ನಮ್ಮ ಸ್ವಾಮಿ ಬಂದಾ
ಶ್ರೀರಾಮಚಂದ್ರ ಪ್ರಭು ಬಂದಾ || ಪ ||
ಕಷ್ಟಕಾರ್ಪಣ್ಯವನು ಕೊನೆಗಾಣಿಸೆ ಬಂದಾ
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಲು ಶ್ರೀರಾಮ ಬಂದಾ
ಕುಣಿಕುಣಿಯುತ ಬಂದಾ ನಲಿನಲಿಯುತ ಬಂದಾ
ದೇವರದೇವ ಶ್ರೀರಾಮ ಬಂದಾ || 1 ||
ಢಮ ಢಮರು ನಾದದಲಿ ಘಂಟೆಯ ನಿನಾದಲಿ
ಝೇಂಕರಿಸಿಹ ವೀಣೆಯಲಿ ಮೇೂಳಗುತಿಹ ಶಂಖದಲಿ
ಮೊಳಗುತಿಹುದು ನಿನ್ನ ನಾಮ ಪ್ರಭು ಶ್ರೀರಾಮನಾಮ ಜೈ ಶ್ರೀರಾಮ್
ಜಯಜಯ ಶ್ರೀರಾಮ ಜಯಜಯ ಶ್ರೀರಾಮ || 2 ||
ಎಲ್ಲಡೆ ನವೇೂಲ್ಲಾಸ ಭುವಿಯಾಗಿದೆ ಕೈಲಾಸ
ಅಯೇೂಧ್ಯೆ ನಿನ್ನ ವಾಸ ಅದ ಕೇಳೆ ಮನಕೆ ಹರ್ಷ
ಚಾತಕಪಕ್ಷಿಯಂತೆ ಕಾಯುತಿಹೆವು ನಿಮಿಷ ನಿಮಿಷ
ಶ್ರಾವಣ ಬಹುಳ ಬಿದಿಗೆ ಬರುವುದೆಂದು
ಮಂದಿರದ ಭುವಿಪೂಜಿಯಾಗಲೆಂದು || 3 ||
ಮತ್ತೆ ಎದ್ದು ಬರುತಿದೆ ಭವ್ಯ ರಾಮ ಮಂದಿರ
ನಿನ್ನನಲ್ಲಿ ಕಾಣ್ವುದೆ ನಿತ್ಯಸತ್ಯ ಸುಂದರ
ವಿಶ್ವವನ್ನು ಬೆಳಗುವುದು ಶ್ರೀರಾಮ ಮಂದಿರ
ಸೂರ್ಯಚಂದ್ರರಂತೆ ಎಂದೂ ಅಜರಾಮರ
ಕನಸು ನನಸಾಗುತಿದೆ ಆಹಾ ಎಂಥ ಸಂದರಾ || 4 ||