ಧ್ಯೇಯ ಧರೆಗೆ ಇಳಿದಿದೆ
ವೀರ ತರುಣರ ಕರುಳಿಗೆ
ಧ್ವಂಸ ಮಾಡಲು ಇರುಳನು
ಧರೆಗೆ ಹರಡಲು ಬೆಳಕನು || ಪ ||
ಶಪಥವೆಂದು ಬಿಡುವೆವು
ಧರೆಯ ಶಾಂತಿಗೆ ದುಡಿವೆವು
ವೀರಹನುಮನೆ ಸ್ಫೂರ್ತಿಯು
ಭಕ್ತಿ ತುಂಬಿದ ಧಾತ್ರಿಯು || 1 ||
ಧರ್ಮ ಸಾಧನೆ ಪಥವಿದು
ಸತ್ಯ ವಾಕ್ಯದ ನಾಡಿದು
ಜಯದ ದುಂಧುಬಿ ಮೊಳಗಿದೆ
ರಾಮ ಮಂದಿರ ಕಟ್ಟಲು || 2 ||
ವೀರ ತರುಣರೆ ಬನ್ನಿರಿ
ಧರ್ಮ ಕಾರ್ಯಕೆ ದುಡಿಯಿರಿ
ವೀರ ಕಂಡ ಕನಸನು
ಮಾಡ ಬನ್ನಿ ನನಸನು || 3 ||