ಚಂದದ ಮನೆ ಆನಂದದರಮನೆ
ಆ ನಂದಕಂದನುದಿಸಿ ಬಂದಿಹ ಮನೆ || ಪ ||
ಸದ್ದನಕೆ ಅಧಿಪತಿ ಗುಣಸುಂದರಿ ಸತಿ
ಕುಂದುಕೊರತೆಯೊಂದು ಇರದ ಹಿಂದು ಸಂಸ್ಕೃತಿ || 1 ||
ಧರ್ಮದ ನಡೆ ನಿತ್ಯ ಸತ್ಯದ ನುಡಿ
ನೇಮ-ನಿಷ್ಠೆ, ಪ್ರೇಮ-ಸ್ನೇಹ ನಮ್ಮ ಕೈಪಿಡಿ || 2 ||
ಭಜನ ಕೀರ್ತನ ನಿತ್ಯ ದೇವ ಪೂಜನ
ಅತಿಧಿ ಅಭ್ಯಾಗತರೊಡಗೂಡಿ ಭೋಜನ || 3 ||
ಮೋಕ್ಷ ಕಾಮನೆ ಲೋಕಹಿತದ ಸಾಧನೆ
ಸಾಧು ಸಂತ ಸಜ್ಜನರಿಗೆ ತೆರೆದಿಹ ಮನೆ || 4 ||
ಶ್ರೀನಿವಾಸನೆ… ಅಲ್ಲ ಗಿರಿಗಳೀಶನೆ
ದೇವನೊಬ್ಬ ನಾಮ ಹಲವು ಎಂಬ ಭಾವನೆ || 5 ||