ಗಾಢ ನೀರವದಲೊಂದು
ಸಣ್ಣ ಕದಲಿಕೆ ಸದ್ದು
ತನ್ನ ಸುತ್ತಲು ತಾನೇ
ತಿರುಗಿ ಅಲೆ ಅಲೆಯಾಗಿ
ವಿಶ್ವ ಕಂಪಿಸಿದ ಹೊತ್ತು
ವಿಶ್ವವೇ ಕಂಪಿಸಿದ ಹೊತ್ತು
ಸಂಘ ಸಂಭವಿಸಿದ ಹೊತ್ತು || ಪ ||
ಮೈಮರೆವೊ? ಮರಣವೊ?
ತನ್ನುಸಿರ ಬಲವಿಹುದೆ?
ಆತ್ಮಹೀನತೆ ವಿಷವ
ಕಿತ್ತೊಗೆದು ಬದುಕೀತೆ?
ಅನುಮಾನ ತುಂಬಿದ ಹೊತ್ತು
ಸಂಘ ಸಂಭವಿಸಿದ ಹೊತ್ತು || 1 ||
ಉಡುಗಿ ಹೋಗಿದ್ದ ಸ್ವರ
ಮರಳಿ ಮೊಳಗಿದ ಸದ್ದು
ಮರಗಟ್ಟಿ ಮಲಗಿದ ದೇಶ
ಬಲಕೆ ಹೊರಳಿದ ಸದ್ದು
ಆತ್ಮದರಿವನು ಪಡೆದ ಹೊತ್ತು
ಸಂಘ ಸಂಭವಿಸಿದ ಹೊತ್ತು || 2 ||
ಸಂಘ ಕಣವೊಂದು ತಾ
ನೂರು ಸಾವಿರವಾಗಿ
ಹಿಂದು ಮಂತ್ರದ ಘೋಷ
ಕಣ ಕಣದಿ ಮಾರ್ದನಿಸಿ
ವಿಶ್ವ ಮಂಗಲ ಬಯಕೆಯ ಹೊತ್ತು
ಸಂಘ ಸಂಭವಿಸಿದ ಹೊತ್ತು || 3 ||