ಯೋಧರೇ ಬಯಸಿ ಬನ್ನಿ

ಯೋಧರೇ ಬಯಸಿ ಬನ್ನಿ ಶುಭೋದಯಕೆ ಸ್ವಾಗತ
ಸ್ವರಾಷ್ಟ್ರದಾಕಾಶದಲ್ಲಿ ಸುಪ್ರಭಾತ ಸೃಜಿಸುತ             || ಪ ||

ಏಳಿ ಏಳಿ ಬಯಲಗಾಳಿ ಸುಖಾಗಮನ ಹೇಳಿದೆ
ಹೆಜ್ಜೆ ಹೆಜ್ಜೆಗೂ ಸ್ವದೇಶ ತನ್ನ ಮಹಿಮೆ ತಿಳಿಸಿದೆ
ಯಜ್ಞಭೂಮಿ ಯಾಗಭೂಮಿ ತ್ಯಾಗಭೂಮಿ ಭಾರತ  || 1 ||

ನದಿಸಮೂಹ ಮಂತ್ರ ಹಾಡಿ ನಿತ್ಯ ಸ್ಪೂರ್ತಿ ನೀಡಿದೆ
ಜನರ ಮನವ ನೆಲದ ಕಣವ ಅತಿ ಪವಿತ್ರ ಮಾಡಿದೆ
ಮಾತೃಭೂಮಿ ಪಿತೃಭೂಮಿ ಗುರುಸ್ವರೂಪಿ ಭಾರತ  || 2 ||

ಅನಾದಿಯಿಂದ ಸಾಧು ಸಂತ ಭಕ್ತರಿಲ್ಲಿ ಬೆಳೆದರು
ಅಸಂಖ್ಯ ವೀರ ಶೂರರಿಲ್ಲಿ ಶಕ್ತರಾಗಿ ಮೆರೆದರು
ಧರ್ಮಭೂಮಿ ಕರ್ಮಭೂಮಿ ವೀರಭೂಮಿ ಭಾರತ || 3 ||

ತಾನಾಗಬಲ್ಲನಿಲ್ಲಿ ನರನು ನಾರಾಯಣ
ಅಮರಗಾನ ಮೊಳಗುತಿಹವು ಗೀತೆ ರಾಮಾಯಣ
ಪುಣ್ಯಭೂಮಿ ದೇವಭೂಮಿ ಮೋಕ್ಷಭೂಮಿ ಭಾರತ || 4 ||

One thought on “ಯೋಧರೇ ಬಯಸಿ ಬನ್ನಿ

Leave a Reply

Your email address will not be published. Required fields are marked *

*

code