ಸಮರಸ ಭಾವ ನಾಡಿನ ಜೀವ

ಸಮರಸ ಭಾವ ನಾಡಿನ ಜೀವ
ಚೈತನ್ಯಮಯ ಅದರ ಪ್ರಭಾವ |
ಅಳಿಸುತ ನೋವ ನಲಿವ ಬೆಳೆಸುವ
ಬಣ್ಣಿಸಲಸದಳ ದಿವ್ಯ ಸ್ವಭಾವ || ಪ ||

ಸಪ್ತಸ್ವರಗಳ ಮೋಹಕ ಲಾಸ್ಯ
ಸಾಮರಸ್ಯದ ರೋಚಕ ಭಾಷ್ಯ
ತಪ್ತ ಹೃದಯಗಳ ಬೇಗೆ ತಣಿಸುವ
ಸಂತೃಪ್ತಿಯ ಸವಿ ಸುಧೆಯ ಉಣಿಸುವ || 1 ||

ಸಾಮರಸ್ಯವೇ ಸೃಷ್ಟಿಯ ನಿಯಮ
ಇದು ಮನುಜತ್ವಕೆ ಹೊಸ ಆಯಾಮ
ಧರೆಯಲಿ ಸ್ವರ್ಗವ ಸೃಜಿಸುವ ಹಾದಿ
ನವ ಭವಿತವ್ಯಕೆ ಭದ್ರ ಬುನಾದಿ || 2 ||

ಸಾಮರಸ್ಯದಿಂ ನಾಡಿಗೆ ಶಕ್ತಿ
ಭಾರತಮಾತೆಯ ನೋವಿಗೆ ಮುಕ್ತಿ
ಕತ್ತಲನೋಡಿಸಿ ಮೂಡಿಸಿ ಕಾಂತಿ
ಸಮರೋನ್ಮುಖ ವಿಶ್ವಕೆ ನಿಜ ಶಾಂತಿ || 3 ||

Leave a Reply

Your email address will not be published. Required fields are marked *

*

code