ಓ… ಗುರುವೇ ವಂದನೆ
ಓ… ಗುರುವೇ ಶಿರವಂದನೆ || ಪ ||
ನಿಮ್ಮ ಪೂಜಿಪ ಕೋಟಿ ತರುಣರ
ಹೃದಯ ಚೇತನ ನೂತನ
ರಾಷ್ಟ್ರ ಪಟದಲಿ ದಿಟ್ಟ ಧೀರರ
ಕ್ಷಾತ್ರ ತೇಜದ ಪ್ರಸರಣ || 1 ||
ಯಜ್ಞ ಜ್ವಾಲೆಯು ನಭದಿ ಚಿಮ್ಮುತ
ಧರ್ಮ ದಾರಿಯ ಬೆಳಗುತಾ
ಹಿಂದು ಕನಕದ ಹೊಳಪು ಹೆಚ್ಚಿಸಿ
ಘನತೆ ಮೆರೆಸಿದೆ ಅನುದಿನ || 2 ||
ಅರಿಗಳೆದೆಯಲಿ ಒಲವು ಪಸರಿಸಿ
ರಾಷ್ಟ್ರವಾಗಿಸೋ ಸಾಧನಾ
ಗತಇತಿಹಾಸದ ಡಮರುಗ ಬಾರಿಸಿ
ಸತ್ಯಸಾರುವ ಶಿವನರ್ತನ || 3 ||