ಮಧುಮಾರ್ಗವಿರಲಿ

ಮಧುಮಾರ್ಗವಿರಲಿ, ಈ ಸಾಧನೆಯ ಪರ್ವದಲಿ
ತನುವಾಗಿ ಮನವಾಗಿ ಅವ ತುಂಬಿ ಬರಲಿ || ಪ ||

ಸೀಳೊಡೆದ ಬಿರುಸ್ವರವು ಮೊರೆದು ಕೇಳಿಹ ಕಾಲ
ತಾಯೊಡಲ ಮುಡಿಗಳಲಿ ಪರದುರುಳ ಜಾಲ
ಅಂಜುವೆದೆ ನಮದಲ್ಲ ಅವನೆಂದ ನುಡಿಗಳ
ನಿಜವಿಂದು ಮಾಡುವೆವು ಎದುರಿಸಿ ಸವಾಲುಗಳ || 1 ||

ಪರಜಾತಿ ಕಿರಿಜಾತಿ ಮನದಿ ಕುಣಿದಿಹ ಗಳಿಗೆ
ತರತಮವು ದೇವರಿಗೂ ಬಿಡರು ಗುಡಿಯೊಳಗೆ
ಹಿಂದು ಪತಿತನು ಅಲ್ಲ ಎಂಬವನ ನಂಬಿಕೆ
ಒಂದಾಗಿ ಸಾಕಾರಗೊಳಿಸುವೆವು ಇಂದಿಗೆ || 2 ||

ಜಾಗರಣ ಮನೆ-ಮನೆಗೆ ಮೂಡಿಸುವ ಹೊತ್ತು
ವಿಸ್ತರಣ ಜನಮನಕೆ ಸಂಘದ ಮಹತ್ತು
ಸರ್ವವು ಸಮಾಜಕೆ ಸ್ವಂತಕ್ಕೆ ಇನಿತೂ
ತೋರುವೆವು ಋಷಿನುಡಿ ಶ್ರಮ ಸಮಯ ತೆತ್ತು || 3 ||

Leave a Reply

Your email address will not be published. Required fields are marked *

*

code