ಅಭಿನವ ಭಾರತದ ನಿರ್ಮಾಣಕೆ

ಅಭಿನವ ಭಾರತದ ನಿರ್ಮಾಣಕೆ
ಯುವಜನ ಶಕ್ತಿಯೆ ಆಧಾರ
ಯುಗಗಳ ಕನಸಿಗೆ ಆಕಾರ…
ನೀಡುವುದೆಮ್ಮಯ ನಿರ್ಧಾರ || ಪ ||

ಆಸೇತು ಹಿಮಾಚಲ ವಿಸ್ತಾರದ
ತಾಯ್ನೆಲ ದೇವರ ವರದಾನ
ಭಾರತ ಮಾತೆಯ ವೀರ ಸುಪುತ್ರರು
ಎಂಬುವುದೆಮಗೆ ಅಭಿಮಾನ || 1 ||

ಋಷಿಮುನಿ ಸಂತರ ಕರ್ಮಭೂಮಿಯಿದು
ಚತುರ್ವೇದಗಳ ತವರೂರು
ಖಡ್ಗವ ಪಿಡಿದು ನಾಡಿನ ರಕ್ಷಣೆ
ಗೈದಿಹ ಶೂರರ ನೆಲೆವೀಡು || 2 ||

ಆಧುನಿಕತೆಯ ವ್ಯಾಮೋಹದಲಿ
ನಮ್ಮತನವನು ತೊರೆಯದಿರಿ
ವಿಶ್ವಕೆ ದಾರಿಯ ತೋರಿದ ಭಾರತ
ಎಂಬುದನೆಂದೂ ಮರೆಯದಿರಿ || 3 ||

ರೋಗ ರುಜಿನಗಳ ಮೌಢ್ಯ ಜಾಡ್ಯಗಳ
ಬೇರು ಸಹಿತ ಕಿತ್ತೆಸೆಯೋಣ
ರಾಷ್ಟ್ರ ಭಕ್ತಿಯ ವಜ್ರಲೇಪದಲಿ
ಹೃದಯ ಹೃದಯಗಳ ಬೆಸೆಯೋಣ || 4 ||

Leave a Reply

Your email address will not be published. Required fields are marked *

*

code