ಭಾರತೀಯ ಹೃದಯವಿಂದು ರಾಷ್ಟ್ರ ದೇವನಾಲಯ ಯುವ ಮನಸಿನ ಭಾವದಲೆಗೆ ರಾಷ್ಟ್ರಭಕ್ತಿ ಶ್ರುತಿ ಲಯ ಕಲೆ-ಸಂಸ್ಕೃತಿ, ಕಥೆ-ಕವನದಿ ಗುರುಭಾರತ ಪರಿಚಯ ಮನುಜಕುಲದ ಉನ್ನತಿಯೇ ತರುಣ ಗಣದ ಆಶಯ || ಪ || ಅನ್ವೇಷಣೆ, ಉತ್ಖನನವು ಹೊಸ ಪುರಾವೆ ನೀಡಿದೆ ಭರತ ಭುವಿಯ ಹಿರಿಮೆಯರಿಮೆ ಹೊಸ ದಿಶೆಯನು ತೋರಿದೆ ದಿಟದ ಚರಿತೆಯರಿತು ಜಗವು ನತಮಸ್ತಕವಾಗಿದೆ ವಿದ್ವಜ್ಜನ ಸಂದೋಹದ ಮಣಿ ಮುಕುಟವು ಮಣಿದಿದೆ || 1 || ಪ್ರತಿಯೋಧನ ಎದೆಗುಂಡಿಗೆ ವಿಶ್ವಾಸದ ಆಗರ ಹೊಸ ಸಾಧನ, ನವ ಚೇತನ ಉತ್ಸಾಹದ ಸಾಗರ […]